ಕ್ಯಾಲಿಫೋರ್ನಿಯಾ: ರಾತ್ರಿಯ ವೇಳೆ ಸುರಕ್ಷತೆಯಿಂದ ಜನರನ್ನು ಮನೆಗೆ ತಲುಪಿಸುವ ಉದ್ದೇಶದಿಂದ ಗೂಗಲ್ ಮ್ಯಾಪ್ ಹೊಸ ಫೀಚರ್ ಒಂದನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ.
ಗೂಗಲ್ ನ XDA ಡೆವಲಪರ್ಸ್ ಈ ಯೋಜನೆಯನ್ನು ಸಿದ್ದಗೊಳಿಸುತ್ತಿದ್ದು ಹೊಸ ಫೀಚರ್ ಅನ್ನು ‘ಲೈಟಿಂಗ್’ ಎಂದು ಹೆಸರಿಸಲಾಗಿದೆ. ಈ ಫೀಚರ್ ರಾತ್ರಿಯ ವೇಳೆ ಮನೆಗೆ ನಡೆದುಕೊಂದು ಹೋಗುವಾಗ ಯಾವ ಮಾರ್ಗದಲ್ಲಿ ಹೆಚ್ಚು ಬೆಳಕಿದೆ, ಕಡಿಮೆ ಬೆಳಕು ಇರುವ ಪ್ರದೇಶ ಯಾವುದು ಎಂಬುದರ ಕುರಿತು ಮಾಹಿತಿ ನೀಡುತ್ತದೆ.
ಇದರಿಂದ ಮಂದ ಬೆಳಕಿನಲ್ಲಿ ಹೋಗುವಾಗ ಎದುರಾಗುವ ಅಪಾಯಗಳು, ಭಯ,ಆತಂಕಗಳು ನಿವಾರಣೆಯಾಗುತ್ತದೆ. ಮಾತ್ರವಲ್ಲದೆ ಮಹಿಳೆಯರಿಗೆ ಈ ಫೀಚರ್ ಬಹಳ ನೆರವಾಗಲಿದೆ ಎಂದು ಗೂಗಲ್ ಅಭಿಪ್ರಾಯಪಟ್ಟಿದೆ.
ಈ ಹೊಸ ಫೀಚರ್ ಇನ್ನು ಪರೀಕ್ಷಾ ಹಂತದಲ್ಲಿದ್ದು ಶೀಘ್ರದಲ್ಲಿ ಜಾರಿಗೆ ತರಲಾಗುವುದು. ಮಾತ್ರವಲ್ಲದೆ ಇದು ಭಾರತದಲ್ಲಿ ಮೊದಲು ಜಾರಿಗೆ ಬರಲಿದೆ ಮತ್ತು ಮಹಿಳಾ ಸುರಕ್ಷತೆಯಲ್ಲಿ ಈ ಫೀಚರ್ ಹೊಸ ಮೈಲಿಗಲ್ಲು ಸಾಧಿಸಲಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ.
Comments are closed.