ಅಂತರಾಷ್ಟ್ರೀಯ

ಮನೆಯ ಹಿತ್ತಲಿನಲ್ಲಿ ಪುಟ್ಬಾಲ್​ ವೀಕ್ಷಣೆ ಮಾಡುತ್ತಿದ್ದವರ ಮೇಲೆ ಗುಂಡಿನ ಸುರಿಮಳೆ

Pinterest LinkedIn Tumblr

ಕ್ಯಾಲಿಫೋರ್ನಿಯಾ : ಸೆಂಟ್ರಲ್​ ಕ್ಯಾಲಿಫೋರ್ನಿಯಾದಲ್ಲಿ ಪುಟ್ಬಾಲ್​ ವೀಕ್ಷಣೆ ಮಾಡುತ್ತಿದ್ದವರ ಮೇಲೆ ಗುಂಡಿನ ಸುರಿಮಳೆಯಾಗಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಮನೆಯ ಹಿತ್ತಲಿನಲ್ಲಿ ಹಲವರು ಜನ ಪುಟ್ಬಾಲ್​ ನೋಡುತ್ತಿದ್ದರು. ಈ ವೇಳೆ ಆಗಮಿಸಿದ ಆಗಂತುಕ ಈ ದಾಳಿ ನಡೆಸಿದ್ದಾನೆ.

ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾಗಿ ಇಲ್ಲಿನ ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಸ್ಥಳೀಯ ವರದಿ ಪ್ರಕಾರ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಿರಬಹುದು ಆದರೆ ಕುರಿತು ಪೊಲೀಸರು ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ 9 ಜನ ಸಾವನ್ನಪ್ಪಿದ್ದು, ಅವರ ಗುರುತನ್ನು ಬಿಟ್ಟುಕೊಟ್ಟಿಲ್ಲ

ಘಟನೆಯಲ್ಲಿ ಸಿಕ್ಕ ಸುಳಿವು, ಹಾಗೂ ಪ್ರತ್ಯೇಕದರ್ಶಿಗಳ ಹೇಳಿಕೆ ಆಧಾರದ ಮೇಲೆ ಆರೋಪಿಗಳ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.