ಅಂತರಾಷ್ಟ್ರೀಯ

ಪತ್ನಿಗೆ ಉಂಗುರದ ಒಳಭಾಗ ಟೊಳ್ಳು ಮಾಡಿ ಅದರಲ್ಲಿ ವೀರ್ಯ ಉಡುಗೊರೆ!

Pinterest LinkedIn Tumblr


ಹೆಂಡತಿಗೆ ಉಂಗುರ ಉಡುಗೊರೆ ನೀಡಬೇಕು ಎನ್ನುವ ಆಲೋಚನೆ ಆಕೆಯ ಪತಿಗೆ ಬರುವುದರಲ್ಲಿ ಯಾವುದೇ ತಪ್ಪಿಲ್ಲ. ಜನ್ಮ ದಿನಕ್ಕೆ, ಮದುವೆ ಆ್ಯನಿವರ್ಸರಿ ಹೀಗೆ ಬೇರೆ ಬೇರೆ ಸಮಯದಲ್ಲಿ ಚಿನ್ನ, ಡೈಮಂಡ್​ ಇಲ್ಲವೇ ಪ್ಲಾಟಿನಂ ಉಂಗುರವನ್ನು ಪತಿ ತನ್ನ ಪತ್ನಿಗೆ ನೀಡಿದ ಉದಾಹರಣೆಗಳು ಬೇಕಷ್ಟಿವೆ. ಆದರೆ, ಬ್ರಿಟನ್​ ವ್ಯಕ್ತಿಯೋರ್ವ ಹೆಂಡತಿಗೆ ವೀರ್ಯದ ಉಂಗುರ ನೀಡಲು ಮುಂದಾಗಿದ್ದಾನೆ.

ಬ್ರಿಟನ್​ ಮೂಲದ ವ್ಯಕ್ತಿ ಹೀಗೊಂದು ಆಲೋಚನೆ ಮಾಡಿದ್ದಾನೆ. ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಈತ, ವಿಭಿನ್ನ ಉಡುಗೊರೆಗಳನ್ನು ನೀಡುತ್ತಿದ್ದ. ಆತನ ಹೆಂಡತಿಯೂ ಭಿನ್ನ ರೀತಿಯ ಗಿಫ್ಟ್​​ ನೀಡುತ್ತಿದ್ದಳು. ಈಗ ಈತನಿಗೆ ಉಂಗುರದಲ್ಲಿ ತನ್ನ ವೀರ್ಯವನ್ನು ಇಟ್ಟು ಗಿಫ್ಟ್​​ ಮಾಡಬೇಕು ಎನ್ನುವ ಆಲೋಚನೆ ಬಂದಿದೆಯಂತೆ. ಈ ಉಂಗುರವನ್ನು ಕ್ರಿಸ್​ಮಸ್​ಗೆ ಉಡುಗೊರೆಯಾಗಿ ನೀಡಬೇಕು ಎನ್ನುವ ಆಲೋಚನೆ ಈತನದ್ದು.

ಈ ಆಲೋಚನೆ ಬಂದಿದ್ದೇ ತಡ ಬ್ರಿಟನ್​ ವ್ಯಕ್ತಿ ಹತ್ತಿರದ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ ಈ ಬಗ್ಗೆ ಹೇಳಿಕೊಂಡಿದ್ದಾನೆ. ಕೆಲವರು ಇವನ ಆಲೋಚನೆ ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ಇನ್ನೂ ಕೆಲವರು ಈತನಿಗೆ ತಲೆಕೆಟ್ಟಿದೆ ಎಂದು ಜರಿದಿದ್ದಾರೆ. ಈ ಬಗ್ಗೆ ಬೇಸರಗೊಂಡಿರುವ ಈತ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾನೆ.

“ನನ್ನ ಆಲೋಚನೆ ಕೇಳಿ ಅನೇಕರು ನಕ್ಕಿದ್ದಾರೆ. ಆದರೆ, ನಾನು ಈ ಬಗ್ಗೆ ತುಂಬಾ ಗಂಭೀರವಾಗಿದ್ದೇನೆ. ಯಾರಿಗಾದರೂ ನನ್ನ ಆಲೋಚನೆ ಇಷ್ಟವಾಗಿ ಉಂಗುರ ಮಾಡಿಕೊಡಲು ಮುಂದೆ ಬನ್ನಿ,” ಎಂದು ಆತ ಕೋರಿದ್ದಾನೆ. ‘

ಉಂಗುರದ ಒಳಭಾಗವನ್ನು ಟೊಳ್ಳು ಮಾಡಿ ಅದರಲ್ಲಿ ವೀರ್ಯ ತುಂಬ ಬೇಕು ಎನ್ನುವ ಆಲೋಚನೆ ಬ್ರಿಟನ್​ ವ್ಯಕ್ತಿಯದ್ದು. ಆದರೆ, ಈ ಆಲೋಚನೆಗೆ ರೂಪ ಕೊಡಲು ಯಾರೂ ಮುಂದೆ ಬರದೇ ಇರುವುದು ಸದ್ಯ ಈತನಿಗೆ ಬೇಸರ ಮೂಡಿಸಿದೆಯಂತೆ. ಇನ್ನು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್​ ಆಗಿದೆ.

Comments are closed.