ಅಂತರಾಷ್ಟ್ರೀಯ

ಎಚ್ -1 ಬಿ ವೀಸಾ ಅರ್ಜಿ ಶುಲ್ಕ 10 ಡಾಲರ್‌ಗೆ ಏರಿಕೆ

Pinterest LinkedIn Tumblr

ಅಮೆರಿಕಾದಲ್ಲಿ ಕೆಲಸ ಮಾಡುವ ವಿದೇಶಿಗರ ಜೇಬಿಗೆ ಕತ್ತರಿ ಬೀಳಲಿದೆ. ವೀಸಾಗಾಗಿ ಉದ್ಯೋಗಿಗಳು ಹೆಚ್ಚಿನ ಹಣ ಖರ್ಚು ಮಾಡ್ಬೇಕಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ -1 ಬಿ ವೀಸಾ ಅರ್ಜಿ ಶುಲ್ಕವನ್ನು ಹೆಚ್ಚಿಸಿದ್ದಾರೆ. ಎಚ್ -1 ಬಿ ವೀಸಾ ಅರ್ಜಿ ಶುಲ್ಕ 10 ಡಾಲರ್ ( ಸುಮಾರು 700 ರೂ.) ಹೆಚ್ಚಾಗಿದೆ.

ಎಲೆಕ್ಟ್ರಾನಿಕ್ ನೋಂದಣಿ ವ್ಯವಸ್ಥೆಯನ್ನು (ಇಆರ್‌ಎಸ್) ಉತ್ತೇಜಿಸಲು ಈ ಶುಲ್ಕ ಸಹಾಯ ಮಾಡುತ್ತದೆ ಎಂದು ಯುಎಸ್ ಪೌರತ್ವ ಮತ್ತು ವಲಸೆ ಸೇವೆ ಹೇಳಿದೆ. ಎಚ್ -1 ಬಿ ವೀಸಾ ಅರ್ಜಿಗೆ 460 ಡಾಲರ್ (ಸುಮಾರು 32 ಸಾವಿರ ರೂಪಾಯಿ) ವಿಧಿಸಲಾಗುತ್ತದೆ. ಇದಲ್ಲದೆ ಕಂಪನಿಗಳ ವಂಚನೆಯನ್ನು ತಡೆಗಟ್ಟಲು ಮತ್ತು ತನಿಖೆ ನಡೆಸಲು 500 ಡಾಲರ್ (ಸುಮಾರು 35 ಸಾವಿರ ರೂಪಾಯಿ) ಹೆಚ್ಚುವರಿ ಶುಲ್ಕ ಪಾವತಿಸಬೇಕು.

ಪ್ರೀಮಿಯಂ ಕ್ಲಾಸ್ ಗೆ ಸುಮಾರು 98 ಸಾವಿರ ರೂಪಾಯಿ ಹಣವನ್ನು ಪಾವತಿಸಬೇಕಾಗುತ್ತದೆ. ಅಮೆರಿಕಾ ಕಂಪನಿಗಳಲ್ಲಿ ಕೆಲಸ ಮಾಡುವ ನುರಿತ ವಿದೇಶಿ ಉದ್ಯೋಗಿಗಳಿಗೆ ಅಮೆರಿಕಾ ಎಚ್-1ಬಿ ವೀಸಾ ನೀಡುತ್ತದೆ. ಅಮೆರಿಕಾ ಕಂಪನಿಗಳು ಪ್ರತಿ ವರ್ಷ ಲಕ್ಷಾಂತರ ಭಾರತ ಹಾಗೂ ಚೀನಾ ಜನರಿಗೆ ಉದ್ಯೋಗ ನೀಡುತ್ತವೆ. ಟ್ರಂಪ್ ಆಡಳಿತ ಭಾರತೀಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಅನೇಕ ಭಾರತೀಯರ ಎಚ್ -1ಬಿ ವೀಸಾವನ್ನು ರದ್ದು ಮಾಡಿದೆಯಂತೆ.

Comments are closed.