ಅಂತರಾಷ್ಟ್ರೀಯ

ಜಪಾನ್‌ನಿಂದ ಪರಿಸರ ಸಹ್ಯ ಮರದ ಕಾರು ತಯಾರಿಕೆ

Pinterest LinkedIn Tumblr


ಟೋಕಿಯೋ: ಹೊಸ ಹೊಸ ಮಾದರಿಯ ಕಾರುಗಳೆಲ್ಲ ರಸ್ತೆ ಮೇಲೆ ಓಡಾಡುತ್ತಿವೆ. ಆದರೆ ಜಪಾನ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪರಿಸರ ಸಹ್ಯ ಕಾರನ್ನು ತಯಾರಿಸಿದೆ. ಅದು ಕಬ್ಬಿಣದ ಬಾಡಿ ಹೊಂದಿಲ್ಲ. ಬದಲಿಗೆ ಮರದ ಬಾಡಿ ಹೊಂದಿದೆ. ಅರ್ಥಾತ್‌ ಇದು ಮರದ ಕಾರು. ಇಂತಹ ಕಾರು ಉತ್ಪಾದಿಸಿರುವುದು ಅಲ್ಲಿನ ಪರಿಸರ ಸಚಿವಾಲಯ.

ಕಸದಿಂದ ರಸ
ಜಲೋಪಿಂಕ್‌ ನೀಡಿದ ವರದಿಯ ಪ್ರಕಾರ, ಕಾರನ್ನು ಸಂಪೂರ್ಣ ಮರದಿಂದ ತಯಾರಿಸಲಾಗಿದ್ದು, ನ್ಯಾನೊ ಸೆಲ್ಯುಲೋಸ್‌ ಫೈಬರ್‌ ಹಾಗೂ ಕೃಷಿ ಸಸ್ಯಗಳಿಂದ ಬಂದ ತ್ಯಾಜ್ಯ ವಸ್ತುಗಳಿಂದ ಕಾರನ್ನು ವಿನ್ಯಾಸಗೊಳಿಸಲಾಗಿದೆ.

ಉಕ್ಕಿಗಿಂತ ಪ್ರಬಲ
ಜಪಾನ್‌ ಪರಿಸರ ಸಚಿವಾಲಯ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಕಾರಿನ ತಯಾರಿಕೆಯಲ್ಲಿ ಬಳಕೆ ಮಾಡಲಾದ ವಸ್ತುವಿನ ತೂಕದ ಐದನೇ ಒಂದು ಭಾಗ ಉಕ್ಕಿನಷ್ಟು ಪ್ರಬಲವಾಗಿದೆ ಎಂದು ಹೇಳಿದೆ.

ಪರಿಸರ ಸ್ನೇಹಿ
ಈ ಕಾರಿಗೆ ಪೆಟ್ರೋಲ್‌ ಬೇಡ. ಜಲಜನಕ ಬಳಸಿ ಓಡುತ್ತದೆ. ಅಷ್ಟೇ ಅಲ್ಲದೆ ತಯಾರಿಕೆ ವೇಳೆ ಕನಿಷ್ಠ ಮಾಲಿನ್ಯ ಉಂಟಾಗಿದೆ. ಹೆಚ್ಚಿನ ಫೈಬರ್‌ ಯಾವುದೂ ಇದರಲ್ಲಿಲ್ಲ. ಈ ಕಾರು ಗಂಟೆಗೆ ಸುಮಾರು 20 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿದೆ.

Comments are closed.