ಅಂತರಾಷ್ಟ್ರೀಯ

ಪಾಪ್ ಗಾಯಕಿ ರಬಿ ಹುಚ್ಚಾಟ – ಮತ್ತೊಮ್ಮೆ ಪ್ರಧಾನಿ ಮೋದಿ ಅವರಿಗೆ ಬೆದರಿಕೆ

Pinterest LinkedIn Tumblr

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ, ಪಾಕಿಸ್ತಾನದ ಲಾಹೋರ್ ಮೂಲದ ಪಾಪ್ ಗಾಯಕಿ ರಬಿ ಫಿರ್ಜಾದ, ತನ್ನ ಮೈ ಮೇಲೆ ವಿಷಪೂರಿತ ಹಾವುಗಳನ್ನು ಹಾಕಿಕೊಂಡು ಜೀವ ಬೆದರಿಕೆ ಒಡ್ಡಿದ್ದಳು.

ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪಾಕಿಸ್ತಾನದ ಅರಣ್ಯ ಇಲಾಖೆ ಸಿಬ್ಬಂದಿ ಆಕೆಯ ನಿವಾಸದ ಮೇಲೆ ದಾಳಿ ನಡೆಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯ ಕೂಡಾ ಆಕೆಗೆ ಜೈಲು ಶಿಕ್ಷೆ ವಿಧಿಸಿದೆ ಎಂದು ಹೇಳಲಾಗಿತ್ತಾದರೂ ಖಚಿತವಾಗಿರಲಿಲ್ಲ.

ಇದೀಗ ಮತ್ತೊಮ್ಮೆ ಹುಚ್ಚಾಟ ಮಾಡಿರುವ ರಬಿ ಫಿರ್ಜಾದ, ಮೈಮೇಲೆ ಆತ್ಮಾಹುತಿ ಬಾಂಬರ್ ರೀತಿಯಲ್ಲಿ ಜಾಕೆಟ್ ಹಾಕಿಕೊಂಡು ಪ್ರಧಾನಿ ಮೋದಿ ಅವರಿಗೆ ಬೆದರಿಕೆ ಹಾಕಿದ್ದಾಳೆ. ಆಕೆಯ ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ. ಕೆಲ ಪಾಕಿಸ್ತಾನಿಯರು ಕೂಡಾ ಈಕೆ ಪಾಕಿಸ್ತಾನದ ಮರ್ಯಾದೆ ತೆಗೆಯುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.

Comments are closed.