ಅಂತರಾಷ್ಟ್ರೀಯ

ಟೆನ್ನಿಸ್ ಸೂಪರ್ ಸ್ಟಾರ್ ರಫೆಲ್ ನಡಾಲ್ ವಿವಾಹ ಬಂಧನದಲ್ಲಿ ಸೆರೆ

Pinterest LinkedIn Tumblr

ಮಲ್ಲೋರ್ಕಾ: ಸ್ಪೈನ್ ನ ಮಲ್ಲೋರ್ಕಾದ ಪ್ರಸಿದ್ದ ಲಾ ಫೋರ್ಟ್ ಲೆಜಾದಲ್ಲಿ ನಡೆದ ವೈಭವದ ಕಾರ್ಯಕ್ರಮದಲ್ಲಿ 33ರ ಹರೆಯದ ನಡಾಲ್ ತಮ್ಮ ಮನದರಸಿಯನ್ನು ವರಿಸಿದರು.

ಕಳೆದ 14 ವರ್ಷಗಳಿಂದ  ನಡಾಲ್- ಪೆರೆಲ್ಲೋ ಜೋಡಿ ಪ್ರೀತಿಯಲ್ಲಿದ್ದು,.ಕಳೆದ ಫೆಬ್ರವರಿಯಲ್ಲಿ ಇವರಿಬ್ಬರ ನಿಶ್ಚಿತಾರ್ಥವಾಗಿತ್ತು.  ಕೊನೆಗೂ ವಿವಾಹ ಬಂಧನದಲ್ಲಿ ಸೆರೆಯಾಗಿದ್ದಾರೆ. ಶನಿವಾರ ನಡೆದ ವಿವಾಹ ಸಮಾರಂಭದಲ್ಲಿ ಬಹುಕಾಲದ ಗೆಳತಿ ಕ್ಸಿಸ್ಕಾ ಪೆರೆಲ್ಲೋ ಅವರನ್ನು ನಡಾಲ್ ವರಿಸಿದರು.

ಕಾರ್ಯಕ್ರಮದಲ್ಲಿ ಫೆಲಿಸಿಯಾನೊ ಲೋಪೆಜ್, ಡೇವಿಡ್ ಫೆರರ್ ಮುಂತಾದ ಟೆನಿಸ್ ಆಟಗಾರರು ಭಾಗವಹಿಸಿದ್ದರು. ಬಾಸೆಲ್ ನ ಮುಂದಿನ ಪಂದ್ಯಾವಳಿಗೆ ಅಭ್ಯಾಸ ನಡೆಸುತ್ತಿರುವ ಕಾರಣ ರೋಜರ್ ಫೆಡರರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ವರದಿಯಾಗಿದೆ.

31ರ ಹರೆಯದ ಪೆರೆಲ್ಲೋ ವಾನಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದು, ವಿಮಾ ಕಂಪನಿಯಲ್ಲಿ ಕೆಲಕ್ಕಿದ್ದರು. ನಂತರ ಆ ಕೆಲಸ ಬಿಟ್ಟು, ರಾಫಾ ನಡಾಲ್ ಫೌಂಡೇಶನ್ ನ ನಿರ್ದೇಶಕಿಯಾಗಿದ್ದಾರೆ.

Comments are closed.