ಅಂತರಾಷ್ಟ್ರೀಯ

ಇರಾನ್ ಮೂಲದ ಆಯಿಲ್ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿ ದಾಳಿ

Pinterest LinkedIn Tumblr

ಜೆಡ್ಡಾಹ್: ಸೌದಿ ಅರೇಬಿಯಾದ ಜೆಡ್ಡಾಹ್ ದಲ್ಲಿರುವ ಇರಾನ್ ಮೂಲದ ಆಯಿಲ್ ಟ್ಯಾಂಕರ್ ಗಳಿಗೆ ಕ್ಷಿಪಣಿ ದಾಳಿ ನಡೆದ ಘಟನೆ ಶುಕ್ರವಾರ ನಡೆದಿದೆ. ಇರಾನಿನ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ಭಯೋತ್ಪಾದಕ ದಾಳಿಯಿರಬಹುದು ಎಂದು ಸಂಶಯಿಸಲಾಗಿದೆ.

ರಾಷ್ಟ್ರೀಯ ಇರಾನೀಯನ್ ತೈಲ ಕಂಪನಿ ಮಾಲಕತ್ವದ ಈ ಟ್ಯಾಂಕರ್ ಗೆ ಹಾನಿಯಾಗಿದ್ದು, ರೆಡ್ ಸಮುದ್ರದ 60 ಕಿಮೀ ದೂರದಲ್ಲಿ ತೈಲ ಸೋರಿಕೆಯಾಗುತ್ತಿದೆ ಎಂದು ವರದಿಯಾಗಿದೆ.

ಅಮೇರಿಕಾ ನೌಕಾ ಪಡೆ ಈ ಸರಹದ್ದಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾಧ್ಯಮದ ವರದಿಯ ಬಗ್ಗೆ ತಿಳಿದುಬಂದಿದೆ. ಇದಲ್ಲದೆ ಬೇರೆ ಯಾವುದೇ ಮಾಹಿತಿ ದೊರೆತಿಲ್ಲ ಎಂದಿದೆ.

Comments are closed.