ಅಂತರಾಷ್ಟ್ರೀಯ

ಮೋದಿಯನ್ನು ನರಕಕ್ಕೆ ಕಳುಹಿಸಲು 4 ಹೆಬ್ಬಾವು ಉಡುಗೊರೆ​ ಎಂದ ಪಾಕ್​ನ ಪಾಪ್​ ಗಾಯಕಿಗೆ ಈಗೇನಾಗಿದೆ ಗೊತ್ತಾ?

Pinterest LinkedIn Tumblr


ಇಸ್ಲಾಮಾಬಾದ್​: ಹೇ ಮೋದಿ! ನಿನ್ನನ್ನು ನರಕಕ್ಕೆ ಕಳುಹಿಸಲು ಪಾಕಿಸ್ತಾನದಿಂದ ಬರಲಿವೆ ನಾಲ್ಕು ಹೆಬ್ಬಾವುಗಳು ಮತ್ತು ಒಂದು ಮೊಸಳೆಯ ಉಡುಗೊರೆ… ಅವು ನಿನ್ನನ್ನು ಕಬಳಿಸುತ್ತವೆ ನೋಡುತ್ತಿರು ಎಂದು ಪಾಕಿಸ್ತಾನದ ಪಾಪ್​ ಗಾಯಕಿಯೊಬ್ಬರು ಬೆದರಿಕೆ ಹಾಕಿದ್ದಾಳೆ. ತನ್ನ ಸಾಮಾಜಿಕ ಜಾಲತಾಣಗಳ ಮೂಲಕ ಈ ಎಚ್ಚರಿಕೆಯ ಸಂದೇಶ ನೀಡಿರುವ ಆಕೆ ಸದ್ಯ ಪಾಕಿಸ್ತಾನದ ಜೈಲು ಸೇರಿದ್ದಾಳೆ!

ರಬಿ ಪೀರ್​ಜಾದಾ ಬಂಧನಕ್ಕೆ ಒಳಗಾಗಿರುವ ಪಾಕಿಸ್ತಾನದ ಪಾಪ್​ ಗಾಯಕಿ. ಜೀವಕ್ಕೆ ಅಪಾಯಕಾರಿಯಾದ ಜಂತುಗಳನ್ನು ಅಕ್ರಮವಾಗಿ ಸಾಕುಪ್ರಾಣಿಗಳನ್ನಾಗಿ ಇರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಅಪಾಯಕಾರಿ ಜಂತುಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದ್ದ ಆಕೆ, ನಾನಿ, ಒಬ್ಬ ಕಾಶ್ಮೀರಿ ಯುವತಿ, ಭಾರತವನ್ನು ಹಣಿಯಲು ಹಾವುಗಳೊಂದಿಗೆ ಸಜ್ಜಾಗಿದ್ದೇನೆ… ಈ ಉಡುಗೊರೆಗಳು ವಿಶೇಷವಾಗಿ ಮೋದಿಗಾಗಿ ಮೀಸಲು… ನೀನು ಕಾಶ್ಮೀರಿ ಜನರನ್ನು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಉಡುಗೊರೆಗಳನ್ನು ನಿನಗಾಗಿ ಸಿದ್ಧಪಡಿಸಿದ್ದೇನೆ… ಆದ್ದರಿಂದ, ನರಕದಲ್ಲಿ ಸಾಯಲು ಸಿದ್ಧನಾಗು… ಆಯಿತಾ? ನನ್ನ ಈ ಸ್ನೇಹಿತರು ನಿನ್ನನ್ನು ಆ ನರಕದಲ್ಲಿ ತಿಂದು ತೇಗಲಿವೆ… ಎಂದು ಹೇಳಿದ್ದಳು.

ರಬಿ ಪೀರ್​ಜಾದಾಳ ಈ ಎಚ್ಚರಿಕೆಯ ಸಂದೇಶವನ್ನು ಗಮನಿಸಿದ ಪಾಕಿಸ್ತಾನದ ಪಂಜಾಬ್​ ವನ್ಯಜೀವಿಗಳ ರಕ್ಷಣೆ ಮತ್ತು ಉದ್ಯಾನಗಳ ಇಲಾಖೆಯ ಅಧಿಕಾರಿಗಳು ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾದರು. ಆಕೆಯ ಬ್ಯೂಟಿಪಾರ್ಲರ್​ ಮೇಲೆ ದಾಳಿ ಮಾಡಿದ ಅವರು ಅಲ್ಲಿದ್ದ ಹೆಬ್ಬಾವು, ಮತ್ತಿತರ ವಿಷಕಾರಿ ಹಾವುಗಳು ಹಾಗೂ ಮೊಸಳೆಯನ್ನು ವಶಕ್ಕೆ ಪಡೆದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಿದರು. ಜತೆ ಆಕೆಯನ್ನು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಿದರು ಎನ್ನಲಾಗಿದೆ.

Comments are closed.