ಅಂತರಾಷ್ಟ್ರೀಯ

ಮೊದಲು ನಾವು ಪರಮಾಣು ಅಣು ಬಾಂಬ್​ ಉಪಯೋಗಿಸುವುದಿಲ್ಲ; ಪಾಕ್ ಪ್ರಧಾನಿ

Pinterest LinkedIn Tumblr


ಇಸ್ಲಾಮಾಬಾದ್​: ಪಾಕಿಸ್ತಾನವೇ ಮೊದಲಿಗೆ ಅಣು ಬಾಂಬ್ಅನ್ನು ಉಪಯೋಗಿಸುವುದಿಲ್ಲ ಎಂದು ಪಾಕ್​ ಪ್ರಧಾನಿ ಇರ್ಮಾನ್​ ಖಾನ್​ ಸೋಮವಾರ ಹೇಳಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದುಗೊಳಿಸಿ, ಈ ಎರಡು ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ಬಳಿಕ ಪಾಕ್ ಮತ್ತು ಭಾರತ ನಡುವಿನ ಪರಿಸ್ಥಿತಿ ಮತ್ತಷ್ಟು ವಿಷಮಗೊಂಡಿತ್ತು.

ಭಾರತ ಮತ್ತು ಪಾಕ್​ ಎರಡು ದೇಶಗಳು ಪರಮಾಣು ಅಣು ಬಾಂಬ್​ಗಳನ್ನು ಹೊಂದಿವೆ. ಒಂದು ವೇಳೆ ಇದೇ ಒತ್ತಡ ಪರಿಸ್ಥಿತಿ ಹೆಚ್ಚಾದರೆ ಅದು ಜಗತ್ತಿಗೆ ಅಪಾಯವಾಗಲಿದೆ. ಪರಮಾಣು ಅಣು ಬಾಂಬ್​ ಅನ್ನು ನಮ್ಮ ಕಡೆಯಿಂದ ಮೊದಲಿಗೆ ನಾವು ಬಳಸುವುದಿಲ್ಲ ಎಂದು ಇರ್ಮಾನ್​ ಖಾನ್​ ಹೇಳಿದರು.

ಲಾಹೋರ್​ನ ಪೂರ್ವ ನಗರದಲ್ಲಿ ಆಯೋಜನೆಗೊಂಡಿದ್ದ ಸಿಖ್​ ಸಮುದಾಯದ ಸಮಾರಂಭದಲ್ಲಿ ಇರ್ಮಾನ್​ ಖಾನ್​ ಈ ಮಾತುಗಳನ್ನು ಹೇಳಿದರು.

ಕಳೆದ ವಾರದ ಹಿಂದೆ ಇರ್ಮಾನ್​ ಖಾನ್ ಅವರು, ನಮ್ಮ ಬಳಿಯೂ ಅಣು ಬಾಂಬ್​ ಇದೆ ಎಂದು ಭಾರತಕ್ಕೆ ಬೆದರಿಕೆಯೊಡ್ಡಿದ್ದರು.

Comments are closed.