ಅಂತರಾಷ್ಟ್ರೀಯ

ಸಿದ್ಧಾರ್ಥ್ ಗೆ ಆದ ಪರಿಸ್ಥಿತಿಯೇ ನನಗೂ ಆಗುತ್ತಿದೆ, ಸರ್ಕಾರಿ ಏಜೆನ್ಸಿಗಳು, ಬ್ಯಾಂಕ್ ಗಳು ಎಂಥವರನ್ನೂ ಹತಾಶೆಗೆ ದೂಡಿಬಿಡುತ್ತವೆ: ಮಲ್ಯ

Pinterest LinkedIn Tumblr

ಲಂಡನ್: ಕಾಫಿ ಡೇ ಉದ್ಯಮಿ ಸಿದ್ಧಾರ್ಥ್ ಗೆ ಆದ ಪರಿಸ್ಥಿತಿಯೇ ನನಗೂ ಆಗುತ್ತಿದೆ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.

ಭಾರತೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ಸಾಲ ಪಡೆದು, ಮರುಪಾವತಿ ಮಾಡದೇ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, ‘ನಾನು ವಿ.ಜಿ ಸಿದ್ದಾರ್ಥ ಅವರೊಂದಿಗೆ ಪರೋಕ್ಷವಾಗಿ ಸಂಬಂಧ ಹೊಂದಿದ್ದೇನೆ. ಅವರೊಬ್ಬ ಒಳ್ಳೆಯ ವ್ಯಕ್ತಿ ಹಾಗೂ ಉತ್ತಮ ಉದ್ಯಮಿ. ಅವರ ಪತ್ರದಲ್ಲಿರೋ ಸಾರಾಂಶ ನೋಡಿ ನನ್ನ ಹೃದಯ ನುಚ್ಚುನಾರಾಯ್ತು. ಸರ್ಕಾರಿ ಏಜೆನ್ಸಿಗಳು ಹಾಗೂ ಬ್ಯಾಂಕ್ ಗಳು ಎಂಥವರನ್ನೂ ಹತಾಶೆಗೆ ದೂಡಿಬಿಡುತ್ತವೆ. ನಾನು ಸಂಪೂರ್ಣ ಸಾಲ ಮರುಪಾವತಿ ಮಾಡುತ್ತೇನೆ ಎಂದರೂ ನನಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ಮತ್ತೊಂದು ಟ್ವೀಟ್ ನಲ್ಲಿ ವಿದೇಶಗಳಲ್ಲಿ ಅಲ್ಲಿನ ಸರ್ಕಾರ ಮತ್ತು ಬ್ಯಾಂಕ್ ​ಗಳು ಸಾಲಗಾರರು ಮಾಡಿದ ಸಾಲ ತೀರಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ ನನ್ನ ವಿಚಾರದಲ್ಲಿ ಇದು ತದ್ವಿರುದ್ಧವಾಗಿದೆ. ನಾನು ಸಾಲ ತೀರಿಸಲು ಮಾಡಿದ ಪ್ರತಿ ಪ್ರಯತ್ನದಲ್ಲೂ ಸರ್ಕಾರ ಮತ್ತು ಬ್ಯಾಂಕ್ ​ಗಳು ತಡೆಗೋಡೆಯಾಗಿ ನಿಂತಿವೆ ಎಂದು ಮಲ್ಯ ಟ್ವೀಟ್​ ಮಾಡಿದ್ದಾರೆ.

Comments are closed.