ಅಂತರಾಷ್ಟ್ರೀಯ

ನಮ್ಮ ವ್ಯಕ್ತಿಯೇ ದಲೈಲಾಮಾ ಉತ್ತರಾಧಿಕಾರಿ!: ಭಾರತಕ್ಕೆ ಚೀನಾ ಪರೋಕ್ಷ ಎಚ್ಚರಿಕೆ!

Pinterest LinkedIn Tumblr


ಬೀಜಿಂಗ್‌[ಜು.15]: ಮುಂದಿನ ದಲೈ ಲಾಮಾ ಅವರ ನೇಮಕ ಪ್ರಕ್ರಿಯೆ ಚೀನಾ ದೇಶದ ಒಳಗಡೆ ನಡೆಯಬೇಕು. ಈ ವಿಚಾರದಲ್ಲಿ ಭಾರತ ಮೂಗು ತೂರಿಸಿದಲ್ಲಿ ಇದು ಎರಡೂ ದೇಶಗಳ ಮಧ್ಯದ ದ್ವಿಪಕ್ಷೀಯ ಮಾತುಕತೆ ಮತ್ತು ಬಾಂಧವ್ಯಕ್ಕೆ ಧಕ್ಕೆ ತರಲಿದೆ ಎಂದು ಚೀನಾ ಎಚ್ಚರಿಸಿದೆ.

ದಲೈ ಲಾಮಾ ಅವರ ನೇಮಕ ಪ್ರಕ್ರಿಯೆ ಧರ್ಮ ಸೂಕ್ಷ್ಮವಾದ ವಿಷಯವಾಗಿದ್ದು, ಅದಕ್ಕೆ ಚೀನಾ ಸರ್ಕಾರಿ ಅಧಿಕೃತ ಮುದ್ರೆ ಅಗತ್ಯ, ಈ ಕುರಿತು ಪಂಡಿತರು, ತಜ್ಞರು ಹಾಗೂ ಅಧಿಕಾರಿಗಳು ಅನುಮೋದನೆ ಕಡ್ಡಾಯವಾಗಿದೆ.

ಅಲ್ಲದೇ ಚೀನಾ ಸರ್ಕಾರ ಇದಕ್ಕಾಗಿ ಸುಮಾರು 200 ವರ್ಷಗಳಷ್ಟು ಹಳೆಯದಾದ ಪ್ರಾಚೀನ ಪರಂಪರೆಯನ್ನು ಪಾಲಿಸಿಕೊಂಡು ಬಂದಿದೆ. ಇದು ಯಾರದೇ ವೈಯಕ್ತಿಕವಾದ ಅಥವಾ ಸಂಘಟನೆಯ ತೀರ್ಮಾನ ಅಥವಾ ಯಾವುದೇ ದೇಶದ ತೀರ್ಮಾನದಿಂದ ಆಗುವಂತದ್ದಲ್ಲ. ಪ್ರಸ್ತುತ ದಲೈ ಲಾಮಾ ಅವರ ಉತ್ತರಾಧಿಕಾರಿ ನೇಮಕ ಅವರ ವೈಯಕ್ತಿಕವಲ್ಲ ಎಂದು ತಿಳಿಸಿದೆ.

Comments are closed.