ಟೋಕಿಯೊ: ಜಪಾನ್ ನ ಯಮಾಗಾಟ ಪ್ರಾಂತ್ಯದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ.
ಸ್ಥಳೀಯ ಕಾಲಮಾನ 10.22ಕ್ಕೆ ಭೂಮಿ ಕಂಪಿಸಿದ್ದು, ಉತ್ತರಕ್ಕೆ 38.6 ಡಿಗ್ರಿ ಅಕ್ಷಾಂಶ ಮತ್ತು ಪೂರ್ವಕ್ಕೆ 139.5 ಡಿಗ್ರಿ ರೇಖಾಂಶದಲ್ಲಿ 10 ಕಿಮೀ ಆಳದಲ್ಲಿ ಕಂಪನದ ಕೇಂದ್ರಬಿಂದು ಕಂಡುಬಂದಿದೆ.
ವಾಯುವ್ಯ ಜಪಾನ್ ನಲ್ಲಿ ಭೂಮಿ ಕಂಪಿಸಿದ್ದು, ಸುನಾಮಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ.
ಮುಂಜಾಗ್ರತೆ ಕ್ರಮವಾಗಿ ಈ ಬಾಗದ ಬುಲೆಟ್ ರೈಲು ಸೇವೆಗಳು ಸ್ಥಗಿತವಾಗಿದೆ. ಇದೀಗ ಆ ಭಾಗದಲ್ಲಿನ ಇನ್ನೂರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಆದರೆ ಇದುವರೆಗೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಕಳೆದ ವರ್ಷ ಜೂನ್ ನಲ್ಲಿ ಸಹ ಜಪಾನ್ ನಲ್ಲಿ ಭೂಕಂಪವಾಗಿದ್ದು ಒಸಾಕಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ .೩೫೦ಕ್ಕೆ ಹೆಚ್ಚು ಮಂದಿ ಗಾಯಗೊಂಡಿದ್ದರು. ಐದು ಮಂದಿ ಮೃತಪಟ್ಟಿದ್ದರು. ಇದಲ್ಲದೆ ಎಂಟು ವರ್ಷಗಳ ಹಿಂದೆ ಸಂಭವಿಸಿದ್ದ ಭೀಕರ ಭೂಕಂಪದಿಂದ ಸುನಾಮಿ ಉಂಟಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು.
Comments are closed.