ಅಂತರಾಷ್ಟ್ರೀಯ

‘ಹಾರ್ಲೆ’ ಮೋಟಾರು ಸೈಕಲ್ ಮೇಲೆ ಭಾರತ ಹೇರಿರುವ ಅಧಿಕ ಆಮದು ತೆರಿಗೆ ವಿರುದ್ಧ ಅಸಮಾಧಾನ ಹೊರಹಾಕಿದ ಟ್ರಂಪ್; ಹೇಳಿದ್ದೇನು…?

Pinterest LinkedIn Tumblr

ವಾಷಿಂಗ್ಟನ್: ಹಾರ್ಲೆ ಡೇವಿಡ್ ಸನ್ ಮೋಟಾರು ಸೈಕಲ್ ಮೇಲೆ ಭಾರತ ಹೇರಿರುವ ಅಧಿಕ ಆಮದು ತೆರಿಗೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕಾವನ್ನು ಪ್ರತಿಯೊಬ್ಬರೂ ಬ್ಯಾಂಕ್ ಎಂದು ಪರಿಗಣಿಸಿ ದರೋಡೆ ಮಾಡಲು ನೋಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ತಮ್ಮ ಆಡಳಿತದಡಿಯಲ್ಲಿ ಅಮೆರಿಕಾವನ್ನು ಮೂರ್ಖ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮದು ಮೂರ್ಖರನ್ನು ಹೊಂದಿರುವ ದೇಶವಲ್ಲ. ಭಾರತವನ್ನು ನೋಡಿ, ನನ್ನ ಉತ್ತಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ ಎಂದು ನೋಡಿ, ಮೋಟಾರು ಸೈಕಲ್ ಮೇಲೆ ಶೇಕಡಾ 100ರಷ್ಟು ತೆರಿಗೆ ವಿಧಿಸಿದ್ದಾರೆ. ಅವರಿಗೆ ನಾವು ಯಾವುದೇ ದರ ಹೇರಿಕೆ ಮಾಡುತ್ತಿಲ್ಲ ಎಂದು ಸಿಬಿಎಸ್ ನ್ಯೂಸ್ ಗೆ ನೀಡಿದ ಸಂದರ್ಶನದ ವೇಳೆ ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ.

ಹರ್ಲೆ ಡೇವಿಡ್ಸನ್ ಮೋಟಾರುಸೈಕಲ್ ಮೇಲೆ ಭಾರತ ವಿಧಿಸಿರುವ ಆಮದು ತೆರಿಗೆಯನ್ನು ಉಲ್ಲೇಖಿಸಿ ಮಾತನಾಡಿದ ಟ್ರಂಪ್, ಈ ಬಗ್ಗೆ ಭಾರತ ಸರ್ಕಾರಕ್ಕೆ ಇಂತಹ ತೆರಿಗೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ಅದನ್ನು ಶೂನ್ಯ ತೆರಿಗೆಗೆ ಇಳಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ.

ಒಂದು ದೂರವಾಣಿ ಕರೆಯಿಂದ ಮೋಟಾರು ಸೈಕಲ್ ಮೇಲಿನ ಆಮದು ದರವನ್ನು ಶೇಕಡಾ 50ಕ್ಕೆ ಇಳಿಸಿದ್ದಾರೆ. ಆದರೂ ಕೂಡ ಅದು ಸಾಧ್ಯವಿಲ್ಲ ಎಂದು ನಾನು ಹೇಳಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಿ ದರ ಇಳಿಸುವ ಕುರಿತು ಪರಿಶೀಲಿಸುತ್ತೇವೆ ಎಂದು ಭಾರತ ಹೇಳಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

Comments are closed.