ಅಂತರಾಷ್ಟ್ರೀಯ

ಇನ್ನು ಮುಂದೆ ಅಮೆರಿಕಾದ ವೀಸಾಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಸೋಷಿಯಲ್ ಮೀಡಿಯಾ ವಿವರ ನೀಡಬೇಕು!

Pinterest LinkedIn Tumblr

ವಾಷಿಂಗ್ಟನ್: ಇಂದಿನ ತಂತ್ರಜ್ಞಾನ ಯುಗದಲ್ಲಿ ಸೋಷಿಯಲ್ ಮೀಡಿಯಾವನ್ನು ಯಾವುದೆಲ್ಲಾ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಅದು ವಿಶ್ವದ ಅಭಿವೃದ್ಧಿ ಶೀಲ ರಾಷ್ಟ್ರ ಅಮೆರಿಕಾವನ್ನು ಬಿಟ್ಟಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಇನ್ನು ಮುಂದೆ ಅಮೆರಿಕಾದ ವೀಸಾಕ್ಕೆ ಅರ್ಜಿ ಸಲ್ಲಿಸುವವರು ತಮ್ಮ ಸೋಷಿಯಲ್ ಮೀಡಿಯಾ ವಿವರಗಳನ್ನು ಸಹ ನೀಡಬೇಕು. ಹೀಗೆಂದು ಅಮೆರಿಕಾ ಸರ್ಕಾರದ ಸ್ಟೇಟ್ ಡಿಪಾರ್ಟ್ ಮೆಂಟ್ ಹೊಸ ಕಾನೂನು ಜಾರಿಗೆ ತಂದಿದೆ.

ಅಮೆರಿಕಾದ ವಿಸಾಕ್ಕೆ ಅರ್ಜಿ ಸಲ್ಲಿಸುವವರು ತಮ್ಮ ಸೋಷಿಯಲ್ ಮೀಡಿಯಾ ಹೆಸರುಗಳನ್ನು ಮತ್ತು ಕಳೆದ 5 ವರ್ಷಗಳಿಂದ ಬಳಕೆಯಲ್ಲಿರುವ ಇಮೇಲ್ ವಿಳಾಸ ಮತ್ತು ಫೋನ್ ನಂಬರ್ ಗಳನ್ನು ಸಲ್ಲಿಸಬೇಕು ಎಂದು ಅಮರಿಕಾ ಸರ್ಕಾರದ ಕಾನೂನು ಹೇಳುತ್ತದೆ.

ಕಳೆದ ವರ್ಷ ಈ ಪ್ರಸ್ತಾಪ ಮುಂದಿಟ್ಟಾಗ 14.7 ಮಿಲಿಯನ್ ಜನರ ಮೇಲೆ ಪ್ರಭಾವ ಬೀರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದರು. ಕೆಲವು ನಿಗದಿತ ರಾಜತಾಂತ್ರಿಕ ಮತ್ತು ಅಧಿಕೃತ ವೀಸಾ ಅರ್ಜಿದಾರರಿಗೆ ವಿನಾಯಿತಿ ನೀಡಲಾಗಿತ್ತು.

ಅದಾಗಿಯೂ ಅಮೆರಿಕಾಕ್ಕೆ ಉದ್ಯೋಗಕ್ಕೆ ಮತ್ತು ಅಧ್ಯಯನಕ್ಕೆ ಪ್ರಯಾಣಿಸುವವರು ತಮ್ಮ ಮಾಹಿತಿಗಳನ್ನು ನೀಡಬೇಕು ಎಂಬ ನಿಯಮವಿದೆ ಎಂದು ಬಿಬಿಸಿ ವರದಿ ಮಾಡಿದೆ.

ಅಮೆರಿಕಾದ ನಾಗರಿಕರನ್ನು ರಕ್ಷಿಸಲು ಅಲ್ಲಿಗೆ ಪ್ರಯಾಣಿಸುವುದನ್ನು ಕಾನೂನುಬದ್ಧಗೊಳಿಸಲು ನಮ್ಮ ತನಿಖೆ ಪ್ರಕ್ರಿಯೆಗಳನ್ನು ಸುಧಾರಿಸಲು ಯಾಂತ್ರಿಕ ವ್ಯವಸ್ಥೆಯನ್ನು ಹುಡುಕಲು ನಾವು ನಿರಂತರ ಪ್ರಯತ್ನದಲ್ಲಿ ತೊಡಗಿದ್ದೇವೆ ಎಂದು ಯುಎಸ್ ಡಿಪಾರ್ಟ್ ಮೆಂಟ್ ತಿಳಿಸಿದೆ.

ಈ ಮುನ್ನ ಹೆಚ್ಚುವರಿ ತಪಾಸಣೆಗೆ ಅಗತ್ಯವಿದ್ದ ಅರ್ಜಿದಾರರು ಮಾತ್ರ ಭಯೋತ್ಪಾದಕ ಪಿಡುಗಿನಲ್ಲಿ ನಲುಗಿ ಹೋಗಿದ್ದ ದೇಶಗಳ ನಾಗರಿಕರು ಅಮೆರಿಕಾದ ವಿಸಾಕ್ಕೆ ಅರ್ಜಿ ಸಲ್ಲಿಸುವಾಗ ತಮ್ಮ ಅಂಕಿಅಂಶಗಳನ್ನು ನೀಡಬೇಕಾಗುತ್ತಿತ್ತು. ಆದರೆ ಇದೀಗ ಅರ್ಜಿದಾರರು ಸೋಷಿಯಲ್ ಮೀಡಿಯಾದಲ್ಲಿನ ತಮ್ಮ ಖಾತೆಗಳನ್ನು ನೀಡಬೇಕು, ಇದರಲ್ಲಿ ಏನಾದರೂ ಸುಳ್ಳು ಹೇಳಿದರೆ ಅಥವಾ ತಪ್ಪಾದ ಮಾಹಿತಿ ನೀಡಿದರೆ ಗಂಭೀರ ವಲಸೆ ಉಲ್ಲಂಘನೆ ಪರಿಣಾಮ ಎದುರಿಸಬೇಕಾಗುತ್ತದೆ.

ಡೊನಾಲ್ಡ್ ಟ್ರಂಪ್ ಆಡಳಿತ ಸರ್ಕಾರ ಈ ನಿಯಮವನ್ನು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮೊದಲಿಗೆ ಪ್ರಸ್ತಾಪಿಸಿತ್ತು.

Comments are closed.