ಅಂತರಾಷ್ಟ್ರೀಯ

ಫೋಟೋಗಾಗಿ ಜೀವ ಪಣಕ್ಕಿಟ್ಟ ಕಿಸ್ಸಿಂಗ್ ಜೋಡಿ!

Pinterest LinkedIn Tumblr


ಕೋಲಂಬೋ: ಎಲ್ಲರಗಿಂತ ನಮ್ಮ ಫೋಟೋಗಳು ಚೆನ್ನಾಗಿರಬೇಕು. ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಲೈಕ್ಸ್, ಕಮೆಂಟ್ ಬರಬೇಕು ಎಂಬುವುದು ಯುವ ಜನತೆಯ ಆಸೆ ಆಗಿರುತ್ತದೆ. ಹಾಗಾಗಿ ಸಾಹಸ ಮಾಡಿ ಅಪಯಾಕಾರಿ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಇಂತಹ ಸ್ಥಳಗಳಲ್ಲಿ ಫೋಟೋಗಳು ಚೆನ್ನಾಗಿಯೇ ಬರುತ್ತೆ, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಕಿಸ್ಸಿಂಗ್ ಕಪಲ್ ಎಂದೇ ಪ್ರಸಿದ್ಧಿ ಪಡೆದಿರುವ ಜೀನ್ ಮತ್ತು ಕ್ಯಾಮಿಲ್ಲೆ ಬೆಟ್ಟದ ನಡುವೆ ಸೇತುವೆ ಮೇಲೆ ಚಲಿಸುತ್ತಿರುವ ರೈಲಿನ ಬಾಗಿಲ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ರೈಲಿನ ಬಾಗಿಲ ಹೊರಗಡೆ ಮುಖಮಾಡಿ ಇಬ್ಬರು ಕಿಸ್ ಮಾಡಿದ್ದು, ಮೂರನೇ ವ್ಯಕ್ತಿ ಫೋಟೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ಫೋಟೋವನ್ನು ತಮ್ಮ ಇನ್ಸಟಾಗ್ರಾಂ ಪೇಜಿನಲ್ಲಿ ಅಪ್ಲೋಡ್ ಮಾಡಿಕೊಂಡು ಇದು ಪ್ರೀತಿಯ ಹುಚ್ಚುತನದ ಮುತ್ತು ಎಂದು ಬರೆದುಕೊಂಡಿದ್ದಾರೆ. ಜೀನ್ ಮತ್ತು ಕ್ಯಾಮಿಲ್ಲೆ ಫೋಟೋ ವೈರಲ್ ಆಗುತ್ತಿದ್ದಂತೆ ಮತ್ತೊಂದು ಜೋಡಿ ಇದೇ ರೀತಿ ಫೋಟೋ ಕ್ಲಿಕ್ಕಿಸಿಕೊಂಡಿದೆ.

ಕಿಸ್ಸಿಂಗ್ ಕಪಲ್ ಫೋಟೋ ನೋಡಿದ ನೆಟ್ಟಿಗರು ವಾವ್, ಅಮೇಜಿಂಗ್, ಸೂಪರ್, ಟ್ರೂ ಲವ್ ಅಂತ ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಹಲವರು ಕೇವಲ ಒಂದು ಫೋಟೋಗಾಗಿ ಪ್ರಾಣವನ್ನ ಪಣಕ್ಕಿಡುವುದು ಹುಚ್ಚುತನ ಎಂದು ಕಮೆಂಟ್ ಮಾಡಿದ್ದಾರೆ. ಫೋಟೋ ಇದೂವರೆಗೂ 43 ಸಾವಿರಕ್ಕೂ ಅಧಿಕ ಲೈಕ್ಸ್, 2 ಸಾವಿರಕ್ಕೂ ಅಧಿಕ ಕಮೆಂಟ್ ಪಡೆದುಕೊಂಡಿದೆ.

ಜೀನ್ ಮತ್ತು ಕ್ಯಾಮಿಲ್ಲೆ ವಿಶ್ವದ ಸುಂದರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿಯ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಕಿಸ್ ಮಾಡುತ್ತಿರುವ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಭಾರತಕ್ಕೂ ಭೇಟಿ ನೀಡಿದ್ದ ಕಿಸ್ಸಿಂಗ್ ಜೋಡಿ ಜೈಪುರ ಕೋಟೆಯ ತಡೆಗೋಡೆಯ ಮೇಲೆ ನಿಂತು ಫೋಟೋ ತೆಗೆದುಕೊಂಡಿದ್ದಾರೆ.

Comments are closed.