ಕಾಠ್ಮಂಡು: ನೇಪಾಳದಲ್ಲಿ ಟೇಕ್ ಆಫ್ ಆಗುತ್ತಿದ್ದ ವಿಮಾನವೊಂದು ಎರಡು ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಮೌಂಟ್ ಎವರೆಸ್ಟ್ ಸಮೀಪ ಇರುವ ಲುಕ್ಲಾ ಏರ್ಪೋರ್ಟ್ನಲ್ಲಿ ಈ ಘಟನೆ ನಡೆದಿದೆ. ಚಿಕ್ಕ ವಿಮಾನ ಟೇಕ್ ಆಫ್ ಆಗುವುದರಲ್ಲಿತ್ತು. ಈ ವೇಳೆ ವಿಮಾನ ನಿಯಂತ್ರಣ ತಪ್ಪಿ ಹೆಲಿಪ್ಯಾಡ್ ಕಡೆ ನುಗ್ಗಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮೃಪಟ್ಟಿದ್ದಾರೆ.
ಎವರೆಸ್ಟ್ ಶಿಖರ ಏರುವವರು ಇದೇ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಾರೆ. ಇಲ್ಲಿ ವಿಮಾನ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಮಾಡುವುದು ಬಹುತೇಕ ಪೈಲಟ್ಗಳಿಗೆ ಸವಾಲಿನ ಸಂಗತಿಯಂತೆ.
ಏಪ್ರಿಲ್ ತಿಂಗಳಲ್ಲಿ ಎವರೆಸ್ಟ್ ಶಿಖರ ಏರುವವರ ಸಂಖ್ಯೆ ಅಧಿಕವಾಗಿರುತ್ತದೆ. ಈ ವೇಳೆ ಈ ವಿಮಾನ ನಿಲ್ದಾಣ ಹೆಚ್ಚು ಬಳಕೆಯಾಗುತ್ತದೆ. ಈ ಭಾಗದ ಹಳ್ಳಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಇದೇ ನಿಲ್ದಾಣ ಬಳಕೆ ಮಾಡಲಾಗುತ್ತದೆ. ಫೆಬ್ರವರಿ ತಿಂಗಳಲ್ಲಿ ಈ ಭಾಗದಲ್ಲಿ ಹೆಲಿಕಾಪ್ಟರ್ ಗುಡ್ಡಕ್ಕೆ ಡಿಕ್ಕಿ ಹೊಡೆದಿತ್ತು. ಈ ವೇಳೆ ನೇಪಾಳ ಪ್ರವಾಸಿ ಸಚಿವ ಸೇರಿ 7 ಜನರು ಮೃತಪಟ್ಟಿದ್ದರು.
Comments are closed.