ಅಂತರಾಷ್ಟ್ರೀಯ

ಲಂಡನ್ ನಲ್ಲಿರುವ ವಜ್ರ ಉದ್ಯಮಿ ನೀರವ್ ಮೋದಿಗೆ ಸಂಕಷ್ಟ: ಮಲ್ಯ ನಂತರ ಭಾರತಕ್ಕೆ ರಾಜತಾಂತ್ರಿಕ ಗೆಲುವು

Pinterest LinkedIn Tumblr


ಲಂಡನ್: ಪಂಜಾಬ್ ಬ್ಯಾಂಕ್ ಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಉದ್ಯಮಿ ನೀರವ್ ಮೋದಿಗೆ ಬಂಧನ ಭೀತಿ ಎದುರಾಗಿದೆ.

ವಂಚನೆ ಪ್ರಕರಣ ಸಂಬಂಧ ನೀರವ್ ಮೋದಿಗೆ ಲಂಡನ್ ವೆಸ್ಟ್‌ಮಿನಿಸ್ಟರ್ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶಿಸಿ, ಮುಂದಿನ ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿದೆ.

ಲಂಡನ್ ಬೀದಿಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿರುವ ನೀರವ್ ಮೋದಿ!

ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಶೀಘ್ರವೇ ನೀರವ್ ಮೋದಿಯನ್ನು ಲಂಡನ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇತ್ತೀಚೆಗೆ ಲಂಡನ್ ನ ಬೀದಿಗಳಲ್ಲಿ ಕಾಣಿಸಿಕೊಂಡಿದ್ದ ನೀರವ್ ಮೋದಿಗೆ ಇದೀಗ ಬಂಧನ ಭೀತಿ ಎದುರಾಗಿದೆ.

ವಂಚನೆ ಪ್ರಕರಣ ಸಂಬಂಧ ನೀರವ್ ಮೋದಿಯನ್ನು ಹಸ್ತಾಂತರ ಮಾಡುವಂತೆ ಇಂಗ್ಲೆಂಡ್ ಸರ್ಕಾರಕ್ಕೆ ಭಾರತ ಮನವಿ ಮಾಡಿತ್ತು. ಈ ಮೂಲಕ ಮಲ್ಯ ಬಳಿಕ ನೀರವ್ ಮೋದಿ ಹಸ್ತಾಂತರ ಪ್ರಕ್ರಿಯೆ ವಿಚಾರದಲ್ಲೂ ಭಾರತ ಮತ್ತೊಂದು ರಾಜತಾಂತ್ರಿಕ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.

Comments are closed.