ಅಂತರಾಷ್ಟ್ರೀಯ

ದ್ವೀಪವೊಂದರಲ್ಲಿ ಒಬ್ಬಂಟಿಯಾಗಿ ಬದುಕುತ್ತಿರುವ ಈ 81 ವರ್ಷದ ಅಜ್ಜಿಯನ್ನೊಮ್ಮೆ ನೋಡಿ…

Pinterest LinkedIn Tumblr

ಎಷ್ಟೋ ಜನರಿಗೆ ದೂರದ ಕಾಡಿನಲ್ಲೋ, ಸಮುದ್ರತೀರದಲ್ಲೋ ಜೀವನವನ್ನು ಕಳೆಯುವ ಆಸೆಯಿರುತ್ತದೆ. ದಕ್ಷಿಣ ಕೊರಿಯಾ ಹಾಗೂ ಜಪಾನ್ ಮಧ್ಯದ ವಿವಾದಾತ್ಮಕ ದ್ವೀಪ ಡೊಕ್ಡೊದಲ್ಲಿ 81 ವರ್ಷದ ಕಿಮ್ ಸಿನ್​ಯೊಲ್ ಎನ್ನುವ ವೃದ್ಧೆ ಒಬ್ಬರೇ ವಾಸಿಸುತ್ತಿದ್ದಾರೆ. 1991ರಲ್ಲಿ ಪತಿಯೊಂದಿಗೆ ಈ ದ್ವೀಪಕ್ಕೆ ಬಂದು ಜೀವಿಸತೊಡಗಿದರು. 2018ರಲ್ಲಿ ಪತಿ ನಿಧನರಾದ ನಂತರವೂ ಇಲ್ಲಿ ಒಬ್ಬರೇ ಜೀವಿಸುತ್ತಿದ್ದಾರೆ. ಆಗಾಗ ಬರುವ ಪ್ರವಾಸಿಗರು, ಪೊಲೀಸರು ಹಾಗೂ ಇಲೆಕ್ಟ್ರಿಕ್ ಮ್ಯಾನ್​ಗಳನ್ನು ಹೊರತುಪಡಿಸಿದರೆ ಈ ದ್ವೀಪದಲ್ಲಿ ಇನ್ಯಾರೂ ವಾಸಿಸುವುದಿಲ್ಲ. ‘ಆ ದ್ವೀಪದಲ್ಲಿ ಜೀವಿಸುವುದು ಹೆಚ್ಚು ಖುಷಿ ಹಾಗೂ ಆರಾಮದಾಯಕವಾಗಿರುತ್ತಾರೆ. ಅಲ್ಲಿದ್ದರೆ ಅವರ ಮನಸು ಹಗುರವಾಗುತ್ತದೆ’ ಎನ್ನುತ್ತಾರೆ ವೃದ್ಧೆಯ ಸೊಸೆ.

Comments are closed.