ಅಂತರಾಷ್ಟ್ರೀಯ

ಈ ಭಯಾನಕ ವಿಡಿಯೋ ನೋಡಿ…! 8 ಅಡಿ ಎತ್ತರದ ಗೋಡೆಯನ್ನು ಹಾರಿ ಮಹಿಳಾ ವಿಜ್ಞಾನಿಯನ್ನು ತಿಂದ ದೈತ್ಯ ಮೊಸಳೆ !

Pinterest LinkedIn Tumblr

ಸಂಶೋಧನೆಗೆಂದು ಸಾಕಿದ್ದ 14 ಅಡಿ ಉದ್ದದ ದೈತ್ಯ ಮೊಸಳೆಯೊಂದು 8 ಅಡಿ ಎತ್ತರದ ಗೋಡೆಯನ್ನು ಹಾರಿ ಮಹಿಳಾ ವಿಜ್ಞಾನಿಯನ್ನು ತಿಂದಿರುವ ಭೀಕರ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

https://youtu.be/AKlbIy4ikPQ

44 ವರ್ಷದ ಡೀಸಿ ಟುವೋ ಮೃತಪಟ್ಟ ವಿಜ್ಞಾನಿ. ಟುವೋ ಎಂದಿನಂತೆ ತಾನು ಕೆಲಸ ಮಾಡುತ್ತಿದ್ದ ಲ್ಯಾಬೋರೆಟರಿಯಲ್ಲಿ ಮೊಸಳೆಗೆ ಆಹಾರ ನೀಡುವ ವೇಳೆ ಬಲಿಯಾಗಿದ್ದಾರೆ.

ಮೊಸಳೆಯನ್ನು 8 ಅಡಿ ಎತ್ತರದ ಟ್ಯಾಂಕ್‍ವೊಂದರಲ್ಲಿ ಇರಿಸಿ ಪೋಷಣೆ ಮಾಡಲಾಗುತ್ತಿದ್ದು, ಆದರೆ ಶುಕ್ರವಾರ ಬೆಳಗ್ಗೆ ಆಹಾರ ನೀಡುವ ವೇಳೆ ಗೋಡೆಯ ಎತ್ತರಕ್ಕೆ ಹಾರಿದ ಮೊಸಳೆ ಟುವೋರನ್ನ ಒಳಗೆ ಎಳೆದುಕೊಂಡು ಜೀವಂತವಾಗಿ ತಿಂದು ಹಾಕಿದೆ. ಲ್ಯಾಬ್ ಸಿಬ್ಬಂದಿ ನೀರಿನಲ್ಲಿ ದೇಹದ ತುಂಡು ಹಾಗೂ ಮೊಸಳೆ ಬಾಯಿಯಲ್ಲಿ ಇತರೇ ಅಂಗಾಂಗಳು ಕಂಡಾಗ ಘಟನೆ ಬೆಳಕಿಗೆ ಬಂದಿದೆ.

ಪ್ರತಿದಿನ ಮೊಸಳೆಗೆ ಚಿಕನ್, ಮಟನ್ ಆಹಾರವನ್ನು ನೀಡಲಾಗುತ್ತಿತ್ತು. ಅಲ್ಲದೇ ಎಲ್ಲವೂ ಫ್ರೆಶ್ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಏಕೆಂದರೆ ಮೊಸಳೆ ಫ್ರೀಜ್ ಮಾಡಿದ ಅಥವಾ 2 ಮೂರು ದಿನಗಳ ಹಿಂದೆ ಸತ್ತ ಪ್ರಾಣಿಗಳನ್ನು ಸೇವಿಸುತ್ತಿರಲಿಲ್ಲ. ಪರಿಣಾಮ ಮೊಸಳೆಯ ಪುಲ್ ಅನ್ನು ಸ್ವಚ್ಛವಾಗಿ ನೋಡಿಕೊಳ್ಳಲಾಗುತ್ತಿತ್ತು. ಆದರೆ ದುರ್ಘಟನೆ ಹೇಗೆ ನಡೆದಿದೆ ಎಂದು ತಿಳಿದು ಬಂದಿಲ್ಲ ಎಂದು ಲ್ಯಾಬ್ ಸಿಬ್ಬಂದಿ ತಿಳಿಸಿದ್ದಾರೆ.

ಮೃತ ಟುವೋ ಪ್ರಾಣಿಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಅಲ್ಲದೇ ಲ್ಯಾಬ್ ಮುಖ್ಯಸ್ಥರು ಕೂಡ ಅವರೇ ಆಗಿದ್ದು, ಘಟನೆ ಹೇಗೆ ನಡೆದಿದೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಟುವೋ ಜೊತೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ತಿಳಿಸಿದ್ದಾರೆ.

Comments are closed.