ಅಂತರಾಷ್ಟ್ರೀಯ

ಟ್ರಂಪ್ ಆಡಳಿತದ ಶ್ವೇತಭವನದ ಪತ್ರಿಕಾ ಕಛೇರಿಯ ಉನ್ನತ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜ್ ಶಾ

Pinterest LinkedIn Tumblr

ವಾಷಿಂಗ್ಟನ್: ಶ್ವೇತಭವನದ ಪತ್ರಿಕಾ ಕಛೇರಿಯ ಉನ್ನತ ವಕ್ತಾರರಾಗಿದ್ದ ಭಾರತೀಯ ಮೂಲದ ರಾಜ್ ಶಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ನ ಆಡಳಿತದಲ್ಲಿ ಅಧಿಕಾರಿಗಳ ನಿರ್ಗಮನವನ್ನು ಸಾರುತ್ತಿದ್ದ ಶಾ ಇದೀಗ ತಾವೇ ಅವರ ಆಡಳಿತದಿಂದ ಹೊರನಡೆದಿದ್ದಾರೆ.

ಅಮೆರಿಕಾದ ಲಾಬಿಂಗ್ ಸಂಸ್ಥೆಗೆ ಸೇರುವ ಸಲುವಾಗಿ ಶಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ತ್ತೀಚಿನ ತಿಂಗಳುಗಳಲ್ಲಿ ಹಲವಾರು ಹಿರಿಯ ಅಧಿಕಾರಿಗಳು ತಮ್ಮ ಸ್ಥಾನದಿಂದ ಹೊರನಡೆದಿದ್ದರು.

34 ವರ್ಷದ ಶಾ ಜನವರಿ 2017ರಲ್ಲಿ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಶ್ವೇತಭವನದ ಉಪ ವಕ್ತಾರ ಹಾಗೂ ರಿಪಬ್ಲಿಕನ್ ನ್ಯಾಷನಲ್ ಕಮಿಟಿಯಲ್ಲಿ ಸಂಶೋಧಕ (ರಿಸರ್ಚರ್) ಆಗಿ ಕಾರ್ಯನಿರ್ವಹಿಸುತ್ತಿದ್ದರು.

Comments are closed.