ಅಂತರಾಷ್ಟ್ರೀಯ

ಇಲ್ಲಿ ಬೆತ್ತಲಾಗಿ ಹೋದರೆ ಮಾತ್ರ ಪ್ರವೇಶ!

Pinterest LinkedIn Tumblr


ಪ್ಯಾರೀಸ್: ಫ್ರಾನ್ಸ್ ದೇಶದಲ್ಲಿ ಮೂರು ವರ್ಷಗಳ ಹಿಂದೆ ನ್ಯೂಡ್ ರೆಸ್ಟೋರೆಂಟ್ ಆರಂಭವಾಗಿತ್ತು. ಸಾಕಷ್ಟು ವಿರೋಧಗಳ ನಡುವೆಯೂ ಆರಂಭವಾಗಿದ್ದ ಈ ರೆಸ್ಟೋರೆಂಟ್ ಇಂದು ಬಾಗಿಲು ಮುಚ್ಚುವ ಸ್ಥಿತಿಯನ್ನು ತಲುಪಿದೆ. ಮಾಲೀಕರು ಕೆಲವು ಕಾರಣಗಳನ್ನು ನೀಡಿದ್ದು, ಕೆಲವೇ ದಿನಗಳಲ್ಲಿ ರೆಸ್ಟೋರೆಂಟ್ ಮುಚ್ಚಲಾಗುತ್ತಿದೆ ಎಂದು ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ.

2016ರಲ್ಲಿ ಟ್ವಿನ್ಸ್ ಮೈಕ್ ಮತ್ತು ಸ್ಟಿಫಿನ್ ಸಾಡಾ ಎಂಬವರು ಈ ರೆಸ್ಟೋರೆಂಟ್ ಆರಂಭಿಸಿದ್ದರು. ಇಷ್ಟು ದಿನಗಳ ನಂತರ ಗ್ರಾಹಕರ ಸಂಖ್ಯೆ ಕಡಿಮೆ ಆಗುತ್ತಿದೆ. ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ನ್ನು 16 ಫೆಬ್ರವರಿ 2019ರಂದು ಮುಚ್ಚಲು ತೀರ್ಮಾನಿಸಿದ್ದೇವೆ ಎಂದು ಮಾಲಕರು ಹೇಳುತ್ತಾರೆ.

ರೆಸ್ಟೋರೆಂಟ್ ಗೆ ಆಗಮಿಸುವ ಗ್ರಾಹಕರಿಗೆ ವಿಭಿನ್ನ ಅನುಭವವನ್ನು ನೀಡಲು ಇದನ್ನು ಆರಂಭಿಸಲಾಗಿತ್ತು. ರೆಸ್ಟೋರೆಂಟ್ ಆಗಮಿಸುವ ಗ್ರಾಹಕರಿಗಾಗಿ ಎರಡು ಪ್ರತ್ಯೇಕ ಚೇಜಿಂಗ್ ರೂಮ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿಯೇ ತಮ್ಮ ಮೊಬೈಲ್ ಗಳನ್ನು ಇರಿಸಿ ಗ್ರಾಹಕರು ಒಳಗಡೆ ತೆರಳಬೇಕಿತ್ತು. ರೆಸ್ಟೋರೆಂಟ್ ಪ್ರವೇಶಿಸುವ ಗ್ರಾಹಕರಿಗಾಗಿ ವಿಶೇಷ ಚಪ್ಪಲಿ, ಶೂ ಮತ್ತು ಸ್ಯಾಂಡಲ್ ವ್ಯವಸ್ಥೆಯನ್ನ ಕಲ್ಪಿಸಲಾಗಿತ್ತು. ಮೊದಲೇ ಆರ್ಡರ್ ಮಾಡಿದಂತೆ ಅವರವರ ಟೇಬಲ್ ಮೇಲೆ ಗ್ರಾಹಕರು ಹೇಳಿದ ಆಹಾರ ಇರಿಸಲಾಗುತ್ತಿತ್ತು.

ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ವೇಟರ್ ಗಳು ಮತ್ತು ಬಾಣಸಿಗರು ಹೈಜೆನಿಕ್ ಬಟ್ಟೆ ಧರಿಸಿ, ತಮ್ಮ ಮುಖವನ್ನು ಮುಚ್ಚಿಕೊಳ್ಳುತ್ತಿದ್ದರು. ಹೋಟೆಲ್ ಆರಂಭವಾದಾಗಿನಿಂದಲೂ ನಿರ್ದಿಷ್ಟ ವಯೋಮಾನದ ಗ್ರಾಹಕರನ್ನು ಸೆಳೆಯಲು ರೆಸ್ಟೋರೆಂಟ್ ಯಶಸ್ವಿಯಾಗಿತ್ತು.

Comments are closed.