ಅಂತರಾಷ್ಟ್ರೀಯ

ಇಂಡೋನೇಷ್ಯಾದಲ್ಲಿ ಮುಂದುವರೆದ ಜ್ವಾಲಾಮುಖಿ, ಸುನಾಮಿ ಎಚ್ಚರಿಕೆ

Pinterest LinkedIn Tumblr


ಇತ್ತೀಚಿನ ದಿನಗಳಲ್ಲಿ ಇಂಡೋನೇಷ್ಯಾದಲ್ಲಿ ಸಂಭವಿಸಿದ ಸುನಾಮಿ ಬೆದರಿಕೆ ಇನ್ನೂ ಮಾಸಿಲ್ಲ. ಅನಾಕ್ ಕ್ರಾಕಟೊ ಅಥವಾ ‘ಕರ್ಕಟಾ’ ಜ್ವಾಲಾಮುಖಿಯಿಂದ ಪ್ರಚೋದಿಸಲ್ಪಟ್ಟ ಸುನಾಮಿ ಇಲ್ಲಿ ಇನ್ನೂ ಸಕ್ರಿಯವಾಗಿದೆ. ಇಲ್ಲಿನ ಆಡಳಿತ ಜ್ವಾಲಾಮುಖಿ ಸಂಭವಿಸಿರುವ 5 ಕಿಮೀ ವ್ಯಾಪ್ತಿಯೊಳಗೆ ಯಾರೂ ಹೋಗದಂತೆ ನಿಷೇಧಿಸಿದೆ. ಅಲ್ಲದೆ, ಜಾವಾ ಮತ್ತು ಸುಮಾತ್ರಾ ನಡುವಿನ ಎಲ್ಲಾ ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಸುನಾಮಿ ಅಲೆಗಳು ಮತ್ತೊಮ್ಮೆ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ.

ಅಧಿಕಾರಿಗಳ ಪ್ರಕಾರ, ಜ್ವಾಲಾಮುಖಿಯಿಂದ ಭಾರಿ ಪ್ರಮಾಣದ ಲಾವಾರಸ ಹೊರ ಬಂದಿದೆ. ವಾತಾವರಣದಲ್ಲಿ ಬಿಸಿ ಮತ್ತು ವಿಷಕಾರಿ ಅನಿಲಗಳನ್ನು ಹೊರಸೂಸುತ್ತವೆ. ಈ ಬಾರಿ ಜ್ವಾಲಾಮುಖಿಯಿಂದ ಹೊಗೆ ಮತ್ತು ಧೂಳು ಅಧಿಕವಾಗಿದೆ.

ಪ್ರದೇಶದಲ್ಲಿ ಮತ್ತೆ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಆ ಜ್ವಾಲಾಮುಖಿಯಿಂದ ಉಂಟಾಗುವ ಅಪಾಯದ ಬಗ್ಗೆ ಇಂಡೋನೇಷ್ಯಾ ಸರ್ಕಾರ ಜನರನ್ನು ಎಚ್ಚರಿಸಿದೆ. ಜ್ವಾಲಾಮುಖಿಯ ಬಗ್ಗೆ ಗುರುವಾರ ಸರ್ಕಾರವು ಅಪಾಯದ ಎಚ್ಚರಿಕೆಯನ್ನು ನೀಡಿದೆ. ಜ್ವಾಲಾಮುಖಿ ಸಕ್ರಿಯಗೊಳ್ಳುವುದಕ್ಕೂ ಮುಂಚಿತವಾಗಿ, ಸುನಾಮಿಯ ಎಚ್ಚರಿಕೆ ಮತ್ತೆ ಬಿಡುಗಡೆ ಮಾಡಿತು.

ಶನಿವಾರ ರಾತ್ರಿ ಸಂಭವಿಸಿದ ಮಾರಣಾಂತಿಕ ಸುನಾಮಿಯಲ್ಲಿ ಸುಮಾರು 400 ಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ.

Comments are closed.