ಅಂತರಾಷ್ಟ್ರೀಯ

ನಗ್ನ ವಿಡಿಯೋ ಪೋರ್ನ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿದ್ದಕ್ಕೆ ಹೋಟೆಲ್​ನವರ ವಿರುದ್ಧ 707 ಕೋಟಿ ಪರಿಹಾರ ಕೇಳಿದ ಮಹಿಳೆ !

Pinterest LinkedIn Tumblr

ನ್ಯೂಯಾರ್ಕ್​: ಅಮೆರಿಕದ ಚಿಕಾಗೋದ ಹಿಲ್ಟನ್​ ಹೋಟೆಲ್​ನಲ್ಲಿ ಮಹಿಳೆಯೊಬ್ಬಳು ರೂಂ ಮಾಡಿದ್ದಳು. ತಾನು ಉಳಿದುಕೊಂಡಿದ್ದ ರೂಮಿನ ಬಾತ್​ರೂಂನಲ್ಲಿ ಶವರ್​ ಅಡಿಯಲ್ಲಿ ನಿಂತು ಆಕೆ ಸ್ನಾನ ಮಾಡುತ್ತಿದ್ದಾಗ ಹೋಟೆಲ್​ ಸಿಬ್ಬಂದಿ ರಹಸ್ಯ ಕ್ಯಾಮರಾದ ಮೂಲಕ ಆಕೆಯ ನಗ್ನ ದೇಹವನ್ನು ಚಿತ್ರೀಕರಣ ಮಾಡಿದ್ದರು. ಆ ವಿಡಿಯೋವನ್ನು ಪೋರ್ನ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿದ್ದರು.

ತನ್ನ ನಗ್ನ ವಿಡಿಯೋ ಪೋರ್ನ್​ ಸೈಟಿಗೆ ಅಪ್​ಲೋಡ್​ ಆಗಿರುವ ವಿಷಯವನ್ನು ತಿಳಿದ ಆ ಮಹಿಳೆ ಹಿಲ್ಟನ್​ ಹೋಟೆಲ್​ನವರು 100 ಮಿಲಿಯನ್ ಡಾಲರ್​ ಅಂದರೆ ಸುಮಾರು 707 ಕೋಟಿ ರೂ. ಪರಿಹಾರ ನೀಡಬೇಕೆಂದು ಹೋಟೆಲ್​ನವರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಹೋಟೆಲ್​ಗೆ ಬರುವ ಅತಿಥಿಗಳ ಖಾಸಗಿತನವನ್ನು ಕಾಪಾಡದೆ ರಹಸ್ಯ ಕ್ಯಾಮೆರಾ ಮೂಲಕ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕೆ, ನನಗೆ ಆಗಿರುವ ಮಾನಸಿಕ ನೋವಿಗೆ, ಭಾವನಾತ್ಮಕ ಒತ್ತಡಕ್ಕೆ, ಪರಿಚಯಸ್ಥರ ಮುಂದೆ ಆಗಿರುವ ಅವಮಾನಕ್ಕೆ 707 ಕೋಟಿ ರೂ. ಪರಿಹಾರ ನೀಡಲೇಬೇಕು ಎಂದು ಆ ಮಹಿಳೆ ವಾದಿಸಿದ್ದಾರೆ.

2015ರಲ್ಲಿ ಹಿಲ್ಟನ್​ ಹೋಟೆಲ್​ನ ರೂಮಿನಲ್ಲಿ ಉಳಿದುಕೊಂಡಿದ್ದ ಆ ಮಹಿಳೆ ಸ್ನಾನ ಮಾಡುವಾಗಿನ ನಗ್ನ ದೇಹವನ್ನು ಸಂಪೂರ್ಣ ರೆಕಾರ್ಡ್​ ಮಾಡಲಾಗಿತ್ತು. ಆ ವಿಷಯ ತಿಳಿದರೂ 2018ರವರೆಗೂ ಆಕೆ ಸುಮ್ಮನೇ ಇದ್ದಳು. ಆದರೆ, ಅದಾಗಿ 3 ವರ್ಷಗಳ ನಂತರ ಪರಿಚಯದ ವ್ಯಕ್ತಿಯೋರ್ವ ಇ-ಮೇಲ್​ ಮೂಲಕ ಆಕೆಯ ನಗ್ನದೇಹವಿರುವ ಪೋರ್ನ್​ಸೈಟಿನ ಲಿಂಕ್​ ಕಳುಹಿಸಿ ‘ಇದು ನೀನೇ ತಾನೇ?’ ಎಂದು ಕೇಳಿದ್ದರು. ಅದಾದ ನಂತರ ಆ ವಿಷಯವನ್ನು ಆಕೆ ಕೆಲಸ ಮಾಡುತ್ತಿದ್ದ ಆಫೀಸಿನವರಿಗೂ ತಿಳಿಸುವುದಾಗಿ ಬೆದರಿಕೆಯೊಡ್ಡಿದ್ದ. ನಂತರ ಆ ವಿಡಿಯೋ ಆಕೆಯ ಗೆಳೆಯರು, ಕುಟುಂಬಸ್ಥರು, ಸಹೋದ್ಯೋಗಿಗಳ ನಡುವೆ ಹರಿದಾಡಿತ್ತು. ಇದರಿಂದ ಬಹಳ ನೊಂದುಕೊಂಡಿದ್ದ ಮಹಿಳೆ ತನಗೆ ಆದ ಅವಮಾನಕ್ಕೆ ಪರಿಹಾರ ಕೇಳಿ ಮೊಕದ್ದಮೆ ದಾಖಲಿಸಿದ್ದಾರೆ.

ಈ ಬಗ್ಗೆ ದೂರು ನೀಡಿರುವ ಮಹಿಳೆ, ತನಗಾದ ರೀತಿಯಲ್ಲೇ ತಾನು ಉಳಿದುಕೊಂಡಿದ್ದ ರೂಮಿಗೆ ಬಂದಿದ್ದ ಅನೇಕ ಮಹಿಳೆಯರ ಬಅತ್​ರೂಂ ವಿಡಿಯೋ ಚಿತ್ರೀಕರಣ ನಡೆಸಿ ಆ ಪೋರ್ನ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ಕ್ಯಾಮೆರಾ ಇಟ್ಟಿರುವ ಆ್ಯಂಗಲ್, ಬಾತ್​ರೂಂ ಎಲ್ಲವೂ ಒಂದೇರೀತಿ ಇದೆ. ಇದನ್ನೇ ಕಸುಬಾಗಿ ಮಾಡಿಕೊಂಡು ಪೋರ್ನ್ ವೆಬ್​ಸೈಟಿನಲ್ಲಿ ಅಪ್​ಲೋಡ್​ ಮಾಡಿ ದುಡ್ಡು ಮಾಡುತ್ತಿರುವ ಹೋಟೆಲ್​ನವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ.

ಈ ಆರೋಪ ಕೇಳಿ ನಮಗೆ ಆಘಾತವಾಗಿದೆ. ನಮ್ಮ ಅತಿಥಿಗಳ ಖಾಸಗಿತನಕ್ಕೆ ಧಕ್ಕೆ ಆಗದಂತೆ ನಾವು ಸದಾ ಎಚ್ಚರ ವಹಿಸುತ್ತೇವೆ. ನಾವು ಇತ್ತೀಚೆಗಷ್ಟೆ ಹೋಟೆಲ್​ ಮರುನವೀಕರಣ ಮಾಡಿಸಿದ್ದೇವೆ. ಆ ವೇಳೆ ನಮಗೆ ಯಾವುದೇ ಹಿಡನ್​ ಕ್ಯಾಮೆರಾ ಅಥವಾ ಮತ್ಯಾವುದೇ ಉಪಕರಣಗಳು ಸಿಕ್ಕಿಲ್ಲ ಎಂದು ಹಿಲ್ಟನ್​ ಹೋಟೆಲ್​ ಮೇಲ್ವಿಚಾರಕರು ಸ್ಪಷ್ಟೀಕರಣ ನೀಡಿದ್ದಾರೆ.

Comments are closed.