ಅಂತರಾಷ್ಟ್ರೀಯ

30 ವರ್ಷದ ದಾಂಪತ್ಯದಲ್ಲಿ ಒಬಾಮಾನನ್ನು ಬಿಟ್ಟು ಬರಲು ಮಿಶೆಲ್​ ಒಬಾಮಾ ನಿರ್ಧರಿಸಿದ್ದೇಕೆ?

Pinterest LinkedIn Tumblr

ವಾಷಿಂಗ್ಟನ್: ಅಮೇರಿಕ ಅಧ್ಯಕ್ಷರಾಗಿದ್ದ ಒಬಾಮ ಕೇವಲ ತಮ್ಮ ಆಡಳಿತದ ಮೂಲಕ ಮಾತ್ರವಲ್ಲದೇ ಅವರಿಗಿದ್ದ ಕೌಂಟಬಿಕ ಬದ್ಧತೆ ಬಗ್ಗೆ ಕೂಡ ಇತರರಿಗೆ ಆದರ್ಶವಾಗಿದ್ದರು.

30 ವರ್ಷಗಳ ಮಿಶೆಲ್​ ಒಬಾಮ ಜೊತೆ ಸುಖ, ದುಃಖ ಹಂಚಿಕೊಂಡ ಇವರ ದಾಂಪತ್ಯದ ಜೀವನದಲ್ಲಿ ಅಪಸ್ವರ ಮೂಡಿ, ದೂರಾಗುವ ನಿರ್ಧಾರ ಕೂಡ ಮಾಡಲಾಗಿತ್ತು ಎಂಬ ತಮ್ಮ ಸತ್ಯವನ್ನು ಮಿಶೆಲ್​ ಒಬಾಮಾ ಹೊರ ಹಾಕಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಕೌಟಂಬಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ

ತಮ್ಮ ಸುದೀರ್ಘ ದಾಂಪತ್ಯದ ಬಗ್ಗೆ ಪೀಪಲ್​ ಮ್ಯಾಗಜಿನ್​ಗೆ ಸಂದರ್ಶನ ನೀಡಿರುವ ಮಿಶೆಲ್, ​ನಮ್ಮಿಬ್ಬರಿಗೂ ವೈವಾಹಿಕ ಜೀವನ ಕುರಿತು ನಾವು ಆಪ್ತಸಮಾಲೋಚಕರ ಬಳಿ ಸಲಹೆ ಪಡೆದಿದ್ದೇವು ಎಂದು ತಿಳಿಸಿದ್ದಾರೆ.

“ಸಮಾಜದಲ್ಲಿ ನಮ್ಮಿಬ್ಬರ ದಾಂಪತ್ಯದದ ಜೀವನ ಬೇರೆ ಅವರಿಗೆ ಮಾದರಿ ಆಗಿದೆ. ಇದಕ್ಕಾಗಿ ನಾವಿಬ್ಬರು ತಮ್ಮ ಜೀವನದಲ್ಲಿ ಬದ್ಧತೆಯಿಂದ ಇರಬೇಕಾಗುತ್ತದೆ. ಗಂಡ-ಹೆಂಡತಿ ನಡುವೆ ಕೆಲವೊಮ್ಮೆ ಭಿನ್ನಾಭಿಪ್ರಾಯ ಮೂಡಿ ಆ ಸಂಬಂಧದಿಂದ ಹೊರಬರಬೇಕು ಎಂದು ಅನಿಸುತ್ತದೆ. ಅದು ಸಾಮಾನ್ಯ. ಈ ರೀತಿ ಭಾವನೆ ನನಗೂ ಕೂಡ ಬಂದಿತ್ತು” ಎಂದಿದ್ದಾರೆ.

ಆ ರೀತಿಯ ವಿಭಿನ್ನ ಸಂದರ್ಭಗಳು ಬಂದವು. ನಾನು ಕೂಡ ಆ ರೀತಿ ಯೋಚಿಸಲಿಲ್ಲ ಎಂದಲ್ಲ. ಈ ಬಗ್ಗೆ ನಾನು ಸಮಾಧಾನವಾಗಿ ನನ್ನ ನಿರ್ಧಾರ ಬಗ್ಗೆ ಹಲವಾರು ಯೋಚಿಸಿದೆ ಎಂದು ಅವರು ತಿಳಿಸಿದರು.

ಆಪ್ತ ಸಮಾಲೋಚನೆ ಬಳಿಕ “ನಾವಿಬ್ಬರು ನಮ್ಮ ವಿಭಿನ್ನ ಚಿಂತನೆ ಕುರಿತು ಚರ್ಚಿಸಿದ್ದೇವು. ಈ ಮೂಲಕ ನನ್ನ ಸಂತೋಷವನ್ನು ಹೇಗೆ ಗಳಿಸುವುದು ಎಂದು ಕಲಿತೆ. ಇದರ ಮೇಲೆ ಕೆಲಸ ಶುರು ಮಾಡಲು ಕಲಿತೆ. ನಾನು ಒಬಾಮ ಬದಲು ಇತರೆ ಜನರಿಂದ ಸಹಾಯವನ್ನು ಕೇಳಲು ಶುರುಮಾಡಿದೆ” ಎಂದರು.

1992ರಲ್ಲಿ ಬರಾಕ್​ ಒಬಾಮ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರುಯ. 26 ವರ್ಷದ ಸುದೀರ್ಘ ದಾಂಪತ್ಯವನ್ನು ಹೊಂದಿರುವ ಇವರಿಗೆ ಮಲಿಯ ಅನ್​ ಮತ್ತು ಸಶಾ ಒಬಾಮ ಎಂಬ ಇಬ್ಬರು ಮಕ್ಕಳಿದ್ದಾರೆ.

Comments are closed.