ಅಂತರಾಷ್ಟ್ರೀಯ

ಇದು ಜಗತ್ತಿನ ಅತಿ ಚಿಕ್ಕ ಕಾಂಡೋಮ್

Pinterest LinkedIn Tumblr


ಲಂಡನ್: ಇಂದಿನ ಆಧುನಿಕ ಜಗತ್ತಿನಲ್ಲಿ ಯುವ ಪೀಳಿಗೆ ಸೇರಿದಂತೆ ಬಹುತೇಕರು ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ. ಆನ್‍ಲೈನ್ ಮಾರುಕಟ್ಟೆಯಲ್ಲಿಯೂ ಕಾಂಡೋಮ್ ಗಳ ಬೇಡಿಕೆ ಹೆಚ್ಚುತ್ತಿದೆ. ಆದ್ರೆ ಎಲ್ಲ ಕಾಂಡೋಮ್ ಗಳ ಬಗ್ಗೆ ಒಂದಲ್ಲೊಂದು ಆರೋಪಗಳು ಕೇಳಿ ಬರುತ್ತವೆ. ಕಾಂಡೋಮ್ ನಲ್ಲಿ ಬಳಕೆ ಮಾಡಲಾಗಿರುವ ರಾಸಾಯನಿಕ ಸೇರಿದಂತೆ ಹಲವು ವಿಧದ ದೂರುಗಳನ್ನು ಬಳಕೆದಾರರು ಮಾಡುತ್ತಿರುತ್ತಾರೆ.

ಇಂಗ್ಲೆಂಡ್ ನಲ್ಲಿರುವ ಕಾಂಡೋಮ್ ತಯಾರಿಕಾ ಕಂಪನಿಯೊಂದು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅತಿ ಚಿಕ್ಕ ಕಾಂಡೋಮ್ ಉತ್ಪಾದಿಸಿದೆ. ದೇ ಫಿಟ್ ಎಂಬ ಕಂಪನಿ ಇದೂವರೆಗೂ ವಿವಿಧ 66 ಗಾತ್ರದ ಕಾಂಡೋಮ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗ ಜಗತ್ತಿನ ಅತಿ ಚಿಕ್ಕ ಕಾಂಡೋಮ್ ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಕಾಂಡೋಮ್ ಗುಣಲಕ್ಷಣ:
ಈ ಹೊಸ ಕಾಂಡೋಮ್ ಸೈಜ್ ನ್ನು ಇ55 ಎಂದು ಕರೆಯಲಾಗುತ್ತದೆ. ಇದು 125 ಮಿ.ಮೀ(4.92 ಇಂಚು) ಉದ್ದವನ್ನು ಹೊಂದಿದ್ದು, 45 ಮಿ.ಮೀ. ಅಗಲವುಳ್ಳದಾಗಿದೆ. ಒಟ್ಟು ಆರು ಕಾಂಡೋಮ್‍ವುಳ್ಳ ಒಂದು ಪ್ಯಾಕೇಟ್ ಬೆಲೆ 661 ರೂ. ಎಂದು ಕಂಪನಿ ತಿಳಿಸಿದೆ. ಅಂದ್ರೆ ಒಂದು ಕಾಂಡೋಮ್ ಗೆ ಗ್ರಾಹಕರು ಅಂದಾಜು 110 ರೂ. ಖರ್ಚು ಮಾಡಬೇಕಾಗುತ್ತದೆ.

ಸದ್ಯ ಈ ಕಾಂಡೋಮ್ ಲಂಡನ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದೆ. ಈ ಕುರಿತು ದೇ ಫಿಟ್ ಕಂಪನಿ ತನ್ನ ಗ್ರಾಹಕರಿಗೆ, ನಮ್ಮ ಕಾಂಡೋಮ್ ಬಳಕೆಯಿಂದ ನಿಮಗೆ ತೃಪ್ತಿ ಸಿಗದೇ ಇದ್ದಲ್ಲಿ ನಿಮ್ಮ ಹಣವನ್ನು ಹಿಂದಿರುಗಿಸಲಾಗುವುದು ಎಂದು ಕಂಪನಿ ಹೇಳಿದೆ.

Comments are closed.