
ಲಂಡನ್: ದಕ್ಷಿಣ ಇಂಗ್ಲೆಂಡ್ನಲ್ಲಿ ನೆಲೆಸಿರುವ ಭಾರತ ಮೂಲದ ದಂಪತಿ ತಮ್ಮ ಮನೆಯ ಕೆಲಸಕ್ಕೆಂದು ದಂಪತಿಯನ್ನು ನೇಮಕ ಮಾಡಿಕೊಂಡಿದ್ದರು. ಆದರೆ, ಅವರಿಗೆ ಸರಿಯಾದ ಊಟ ನೀಡದೆ, ಟಾಯ್ಲೆಟ್ ವ್ಯವಸ್ಥೆಯನ್ನೂ ಕಲ್ಪಿಸದೆ ಶೆಡ್ನಲ್ಲಿ ಸೇವಕರಂತೆ ಇರಿಸಿಕೊಂಡಿದ್ದ ಆರೋಪದಲ್ಲಿ ದಂಪತಿಯನ್ನು ಬಂಧಿಸಲಾಗಿದೆ.
ಆಧುನಿಕ ಜೀವನ ನಡೆಸುತ್ತಿದ್ದರೂ ಮನೆಯ ಕೆಲಸದವರನ್ನು ಜೀತದ ಆಳುಗಳಂತೆ ನೋಡಿಕೊಳ್ಳುತ್ತಿದ್ದ ದಂಪತಿಯ ಮೇಲೆ ಅಕ್ಕಪಕ್ಕದ ಮನೆಯವರು ದೂರು ನೀಡಿದ್ದರು. ನಾಲ್ಕು ವರ್ಷಗಳಿಂದ ತಮ್ಮ ಮನೆಯ ಗಾರ್ಡನ್ ಪಕ್ಕ ಇರುವ ಶೆಡ್ನಲ್ಲಿ ಕೆಲಸದಾಳನ್ನು ಇಟ್ಟುಕೊಂಡಿದ್ದ ಭಾರತ ಮೂಲದ ಪಲ್ವಿಂದರ್ ಮತ್ತು ಪ್ರಿತ್ಪಾಲ್ ಬಿನ್ನಿಂಗ್ ಅವರನ್ನು ಇಂಗ್ಲೆಂಡ್ ಪೊಲೀಸರು ಬಂಧಿಸಿದ್ದಾರೆ.
ಪಲ್ವಿಂದರ್ ದಂಪತಿಯ ಮನೆಗೆ ಕಳೆದ ವಾರ ದಾಳಿ ನಡೆಸಿದ ಯುಕೆಯ ಗ್ಯಾಂಗ್ಮಾಸ್ಟರ್ಸ್ ಮತ್ತು ಲೇಬರ್ ಅಬ್ಯೂಸ್ ಅಥಾರಿಟಿ ಸಿಬ್ಬಂದಿ ದಂಪತಿಯ ಮೇಲೆ ದೂರು ದಾಖಲಿಸಿಕೊಂಡಿದ್ದರು. ಪೋಲೆಂಡ್ ದೇಶದ ವ್ಯಕ್ತಿಯನ್ನು ಆಳಿನಂತೆ ನಡೆಸಿಕೊಳ್ಳುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ತಿನ್ನಲು ಆಹಾರ ನೀಡಬೇಕೆಂದರೆ ಮನೆಯಲ್ಲಿ ಕೆಲಸದಾಳಾಗಿ ಇರಬೇಕೆಂದು ಆಮಿಷವೊಡ್ಡಿ, ಆತನಿಗೆ ಮೌಲಸೌಲಭ್ಯಗಳ್ಯಾವುವನ್ನೂ ನೀಡದೆ ಹಿಂಸೆ ನೀಡಲಾಗುತ್ತಿತ್ತು.
ತನಿಖೆಯ ವೇಳೆ ತನಗಾದ ಹಿಂಸೆಯನ್ನು ಹೇಳಿಕೊಂಡಿರುವ ಪೋಲೆಂಡ್ ವ್ಯಕ್ತಿ, ನನಗೆ ಮಲಗಲು ಒಂದು ಪ್ಲಾಸ್ಟಿಕ್ ಚೇರ್ ನೀಡಲಾಗಿತ್ತು. ದಿನವೂ ಹಳಸಿದ ಆಹಾರ ನೀಡುತ್ತಿದ್ದರು. ಗಾಳಿ, ಬೆಳಕಿಲ್ಲದ ಶೆಡ್ನಲ್ಲಿ ಮಲಗಲು ಅವಕಾಶ ಕೊಟ್ಟಿದ್ದರು. ಟಾಯ್ಲೆಟ್ ವ್ಯವಸ್ಥೆಯನ್ನೂ ನೀಡಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.
Comments are closed.