ಅಂತರಾಷ್ಟ್ರೀಯ

8ರ ಬಾಲಕಿಗೆ ಸಾಗಾ ಸರೋವರವೊಂದರಲ್ಲಿ ಈಜುತ್ತಿದ್ದಾಗ ಸಿಕ್ಕ 1,500 ವರ್ಷ ಹಳೆಯ ಕತ್ತಿ!

Pinterest LinkedIn Tumblr


ಸ್ವೀಡನ್‌ನ 8 ವರ್ಷ ವಯಸ್ಸಿನ ಬಾಲಕಿ ಸಾಗಾ ಸರೋವರವೊಂದರಲ್ಲಿ ಈಜುತ್ತಿದ್ದಾಗ ಆಕೆಗೆ ತುಕ್ಕು ಹಿಡಿದ, ಶಿಥಿಲಾವಸ್ಥೆಯಲ್ಲಿರುವ ಕತ್ತಿಯೊಂದು ದೊರಕಿದೆ. ಅದು ಸಾಮಾನ್ಯ ಕತ್ತಿ ಇರಬೇಕೆಂದು ಭಾವಿಸಿ ಆಕೆ ಹಲವಾರು ದಿನಗಳ ಕಾಲ ಅದನ್ನು ತನ್ನಲ್ಲಿಯೇ ಇರಿಸಿಕೊಂಡಿದ್ದಳು. ಬಳಿಕ ಆಕೆಯ ಕುಟುಂಬ ಅದ ನ್ನು ಪುರಾತತ್ವ ಇಲಾಖೆಗೆ ಒಪ್ಪಿಸಿತು.

ಸಂಶೋಧಕರು ಕತ್ತಿಯ ಕುರಿತು ಸಂಶೋಧನೆ ಕೈಗೊಂಡ ಬಳಿಕ ಅದು 17ನೇ ಶತಮಾನಕ್ಕಿಂತ ಹಳೆಯದು ಎಂದು ತಿಳಿದುಬಂದಿದೆ. ಈ ಕತ್ತಿಗೆ ಸುಮಾರು 1,500 ವರ್ಷಗಳ ಇತಿಹಾಸವಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ. ಸದ್ಯ ಈ ಕತ್ತಿಯನ್ನು ಸ್ಥಳೀಯ ಪ್ರಾಚೀನ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ.

Comments are closed.