ಅಂತರಾಷ್ಟ್ರೀಯ

ಪಾಕಿಸ್ತಾನದ​ ಪ್ರಧಾನಿಯಾಗಿ ಇಮ್ರಾನ್ ಖಾನ್​ ಪ್ರಮಾಣ ವಚನಕ್ಕೆ ಯಾವುದೇ ವಿದೇಶಿ ನಾಯಕರಿಗೆ ಆಹ್ವಾನವಿಲ್ಲ !

Pinterest LinkedIn Tumblr


ಪಾಕ್​ ನೂತನ ಪ್ರಧಾನಿಯಾಗಿ ನಿವೃತ್ತ ಕ್ರಿಕೆಟಿಗ ಇಮ್ರಾನ್ ಖಾನ್​ ಪ್ರಮಾಣ ವಚನ ಸ್ವೀಕರಿಸಲಿದ್ದು, ಪದಗ್ರಹಣ ಕಾರ್ಯಕ್ರಮಕ್ಕೆ ಯಾವುದೇ ವಿದೇಶಿ ನಾಕರನ್ನು ಆಹ್ವಾನಿಸುತ್ತಿಲ್ಲ ಎಂದು ಪಾಕಿಸ್ತಾನದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ನಿರ್ಮಾಣವಾಗಿದ್ದು, ಇಮ್ರಾನ್​ ನೇತೃತ್ವದ ಪಿಟಿಐ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಪಿಟಿಐ ಸೇರಿದಂತೆ ಜರ್ದಾರಿ ಪಕ್ಷ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದೆ.

ಪಾಕ್​ ಪ್ರಧಾನಿಯಾಗಿ ​ಆಗಸ್ಟ್​.11 ರಂದು ಇಮ್ರಾನ್​ ಖಾನ್​ ಅವರು ಪ್ರಮಾಣ ವಚನ ಸ್ವೀಕರಿಸಲಿದ್ಧಾರೆ. ಈ ಕಾರ್ಯಕ್ರಮಕ್ಕೆ ತಮ್ಮ ಆಪ್ತ ಸ್ನೇಹಿತರು ಹೊರತುಪಡಿಸಿ ಯಾವುದೇ ವಿದೇಶಿ ನಾಯಕರಿಗೂ ಆಹ್ವಾನವಿಲ್ಲ ಎಂದು ಪಾಕ್​ ವಿದೇಶಾಂಗ ಸಚಿವಾಲಯ ತಿಳಿಸಿದೆ ಎನ್ನಲಾಗಿದೆ.
ಈ ಮೂಲಕ ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭಾಗವಹಿಸುತ್ತಾರೆ ಎಂಬ ಎಲ್ಲಾ ಊಹಾ ಪೋಹಗಳಿಗೆ ತೆರೆ ಬಿದ್ದಿದೆ. ಇನ್ನು ಇಮ್ರಾನ್ ಖಾನ್ ಅವರ ಸ್ನೇಹಿತರಾದ ನಟ ಅಮೀರ್ ಖಾನ್, ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್, ಕಪಿಲ್ ದೇವ್, ನವಜೋತ್ ಸಿಂಗ್ ಸಿದು ಅವರಿಗೆ ಆಹ್ವಾನ ನೀಡಿದ್ದಾರೆ.

ಇಮ್ರಾನ್​ ಆಹ್ವಾನಕ್ಕೆ ಪ್ರತಿಕ್ರಿಯಿಸಿರುವ ನವಜೋತ್ ಸಿಂಗ್ ಸಿದು, ಇಮ್ರಾನ್​ ಖಾನ್​ ಬಹಳ ದೊಡ್ಡ ಗೌರವ ಸೂಚಿಸಿದ್ಧಾರೆ. ಇದು ಅವರ ವಯಕ್ತಿಕ ಆಹ್ವಾನವಾಗಿದೆ. ನಾನು ರಾಷ್ಟ್ರದ ವಿದೇಶಾಂಗ ನೀತಿಯನ್ನು ಗೌರವಿಸುತ್ತೇನೆ. ಹೀಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮವನ್ನು ಅದ್ದೂರಿಯಾಗಿಸಿ ಜನರ ದುಡ್ಡನ್ನು ನೀರುಪಾಲು ಮಾಡಲು ಇಷ್ಟವಿಲ್ಲ. ನಾವು ಪ್ರಮಾಣ ವಚನ ಕಾರ್ಯಕ್ರಮವನ್ನು ಸರಳವಾಗಿ ಮಾಡುತ್ತಿದ್ದೇವೆ. ಹೀಗಾಗಿ, ವಿದೇಶಿ ನಾಯಕರನ್ನು ಆಹ್ವಾನಿಸುತ್ತಿಲ್ಲ. ಕೇವಲ ನನ್ನ ಆತ್ಮೀಯರನ್ನು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದೇನೆ ಎಂದು ಇಮ್ರಾನ್​ ಖಾನ್​ ಪ್ರತಿಕ್ರಿಯಿಸಿದ್ಧಾರೆ.

Comments are closed.