ಅಂತರಾಷ್ಟ್ರೀಯ

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ – ಮರ್ಯಾಮ್ ಗೆ ಅಡಿಯಾಲಾ ಜೈಲಿನಲ್ಲಿ ‘ಬಿ’ ಕ್ಲಾಸ್ ಸೌಲಭ್ಯ!

Pinterest LinkedIn Tumblr

ಇಸ್ಲಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಪುತ್ರಿ ಮರ್ಯಾಮ್ ಗೆ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಿ ಕ್ಲಾಸ್ ಸೌಲಭ್ಯ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಿ ಕ್ಲಾಸ್ ಕೈದಿಗಳಿಗೆ ಜೈಲಿನಲ್ಲಿ ಎಸಿ, ಟಿವಿ, ಮತ್ತಿತರ ಸೌಲಭ್ಯಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ.

ಶರೀಫ್ ಮತ್ತು ಮರ್ಯಾಮ್ ರನ್ನು ನಿನ್ನೆ ಬಂಧನ ಮಾಡಲಾಗಿತ್ತು, ಲಂಡನ್ ನಲ್ಲಿ ಐಷಾರಾಮಿ ಬಂಗಲೆ ಹೊಂದಿರುವ ಭ್ರಷ್ಟಾಚಾರ ಕೇಸ್ ನಲ್ಲಿ ತಂದೆ ಮತ್ತು ಮಗಳನ್ನು ಬಂಧಿಸಲಾಗಿದೆ,

ಪಾಕಿಸ್ತಾನ ಸುಪ್ರೀಂಕೋರ್ಟ್‌ನಿಂದ 10 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಪಾಕ್‌ನ ಮಾಜಿ ಪ್ರಧಾನಿ ನವಾಜ್ ಷರೀಫ್ ಲಂಡನ್‌ನಿಂದ ಪಾಕಿಸ್ತಾನಕ್ಕೆ ಶುಕ್ರವಾರ ರಾತ್ರಿ ಮಗಳು ಮರಿಯಮ್‌ ಜತೆ ಬಂದಿಳಿಯುತ್ತಿದ್ದಂತೆ ಬಂಧಿಸಲಾಗಿದೆ.

ಅಬುದಾಬಿಯಿಂದ ಬಂದ ನಂತರ ಅವರನ್ನು ರಾವಲ್ಪಿಂಡಿ ಜೈಲಿಗೆ ಕೊಂಡೊಯ್ಯಲಾಯಿತು. ನವಾಜ್‌ ಷರೀಫ್‌ ಆಗಮನಕ್ಕೂ ಮುನ್ನ ರಾಷ್ಟ್ರೀಯ ಭಷ್ಟಾಚಾರ ನಿಗ್ರಹ ದಳದ 10ಕ್ಕೂ ಹೆಚ್ಚು ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಕೈದಿಗಳ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ, ಶಿಕ್ಷಣದ ಮೇಲೆ, ಅವರ ಜೀವನ ಶೈಲಿ ಆಧರಿಸಿ ಜೈಲಿನಲ್ಲಿ ಅವರಿಗೆ ಕ್ಲಾಸ್ ಬಿ ವ್ಯವಸ್ಥೆ ಮಾಡಲಾಗುತ್ತದೆ. ಎ ಮತ್ತು ಬಿ ಕ್ಲಾಸ್ ವರ್ಗದ ಕೈದಿಗಳಿಗೆ ಉತ್ತಮ ಸೌಲಭ್ಯ ಒದಗಿಸಲಾಗುತ್ತದೆ.

Comments are closed.