ಅಂತರಾಷ್ಟ್ರೀಯ

ಸುಖ ದಾಂಪತ್ಯದ ರಹಸ್ಯ ಬಿಚ್ಚಿಟ್ಟ ಅಮೆರಿಕಾ ಮಾಜಿ ಅಧ್ಯಕ್ಷ ಒಬಾಮಾ

Pinterest LinkedIn Tumblr


ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೊದಲಿನಿಂದಲೂ ಸಂಬಂಧಗಳಿಗೆ ಹೆಚ್ಚು ಬೆಲೆಕೊಟ್ಟುಕೊಂಡು ಬಂದ ಭಾವನಾ ಜೀವಿ. ತಾನು ಎಲ್ಲೇ ಹೋದರೂ, ಏನೇ ನಿರ್ಧಾರ ಕೈಗೊಂಡರು ಅದರ ಹಿಂದೆ ಅವರ ಹೆಂಡತಿ ನಗುಮುಖದ ಮಿಚ್ಚೆಲ್ ಒಬಾಮಾ ಇದ್ದೇ ಇರುತ್ತಾರೆ.

ಆ ನಿಟ್ಟಿನಲ್ಲಿ ಈ ಜೋಡಿ ಅಮೆರಿಕಾಕ್ಕೆ ಮಾದರಿ. ಅಲ್ಲದೇ ಒಬಾಮಾ ಭಾರತ, ಇಲ್ಲಿನ ಸಂಬಂಧಗಳ ಆಳ ಅಂತರಗಳ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡು ಆ ಬಗ್ಗೆ ಗೌರವ ಬೆಳೆಸಿಕೊಂಡಿದ್ದ ವ್ಯಕ್ತಿ. ಭಾರತೀಯ ಕುಟುಂಬ ವ್ಯವಸ್ಥೆ, ಗಾಂಧಿ ಆದರ್ಶಗಳು ಎಲ್ಲದ್ದರಿಂದಲೂ ಪ್ರಭಾವಿತವಾಗಿದ್ದ ಒಬಾಮಾ ಸಂಬಂಧಗಳಿಗೆ ಕೊಟ್ಟ ಮಹತ್ವ ಅನನ್ಯ. ಹಾಗಾಗಿ ಅವರು ಆಡಿರುವ ಮೂರು ಮಾತುಗಳು ನಮ್ಮ ಸಂಬಂಧಕ್ಕೂ ಅನ್ವಯಿಸಬಹುದು.

ಒಬಾಮಾ ಅಮೆರಿಕಾ ಅಧ್ಯಕ್ಷರಾಗಿದ್ದ ವೇಳೆ ಅವರಿಗೆ ಹಿರಿಯ ಸಲಹೆಗಾರರಾಗಿದ್ದ ಡಾನ್ ಪಿಫಿಫರ್ ಬರೆದಿರುವ ಪುಸ್ತಕದಲ್ಲಿ ಅವರು ಒಬಾಮಾ ಅವರು ಸಂಬಂಧಗಳಿಗೆ ಕೊಡುತ್ತಿದ್ದ ಬೆಲೆ, ಅದರ ಬಗ್ಗೆ ಅವರಿಗಿದ್ದ ಮಮತೆ, ವ್ಯಕ್ತಿಗಳ ಬದುಕಿನಲ್ಲಿ ಸಂಬಂಧಗಳು ಚೆನ್ನಾಗಿರಬೇಕೆಂದರೆ ಏನೇನು ಮಾಡಬೇಕು ಎಂದುಕೊಂಡಿದ್ದರು ಎಲ್ಲವನ್ನೂ ಬರೆದಿದ್ದಾರೆ. ಆ ಕತೆಯನ್ನು ಅವರದೇ ಮಾತುಗಳಲ್ಲಿ ಕೇಳಿ.

ಒಮ್ಮೆ ಒಬಾಮಾ ಜೊತೆಗೆ ಡಾನ್ ಪಿಫಿಫರ್ ಮದುವೆಯೊಂದಕ್ಕೆ ಹೋಗಿದ್ದ ವೇಳೆ ಒಬಾಮಾ ಹೇಳಿದರಂತೆ, ‘ಮದುವೆ ಎನ್ನುವುದು ದೊಡ್ಡ ಅನುಬಂಧ. ನಾವು ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೇವೆ. ನನ್ನ ಪ್ರಕಾರ ಮದುವೆಗೂ ಮೊದಲು ಹುಡುಗ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಮೂರು ಅತಿ ಮುಖ್ಯ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು

1. ಹುಡುಗಿಯಲ್ಲಿ ನಿಮಗೆ ಏನಾದರೂ ವಿಶೇಷತೆ ಕಾಣಿಸಿತೇ? (ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷತೆ ಇದ್ದೇ ಇರುತ್ತದೆ. ನೀವು ನೋಡಿದ ಸಂಗಾತಿಯಲ್ಲಿ ಏನು ವಿಶೇಷತೆ ಇದೆ. ಅದು ನಿಮ್ಮ ವ್ಯಕ್ತಿತ್ವಕ್ಕೆ ಸೂಕ್ತವಾಗುತ್ತದೆಯೇ ಎನ್ನುವುದನ್ನು ತಿಳಿಯುವುದು)

2. ಅವಳು ನಿಮ್ಮನ್ನು ಜೀವನದಲ್ಲಿ ಚೆನ್ನಾಗಿ ನಗಿಸುತ್ತಾಳೆ ಎನ್ನಿಸಿತೇ? (ನಗಿಸುವುದು ಎಂದರೆ ಸಂತೋಷಪಡಿಸುವುದು. ಒಂದು ಗಂಡು ಹೆಣ್ಣು ದಂಪತಿಗಳಾಗಿ ಒಂದಾದ ಮೇಲೆ ಒಬ್ಬರ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳವುದು.
ಅವಳೊಂದಿಗೆ ಇದ್ದರೆ ನೀವು ಜೀವಮಾನ ಪೂರ್ತಿ ಸಂತೋಷವಾಗಿರುತ್ತೀರಿ ಎನ್ನಿಸುವುದು)

3. ನಿಮ್ಮ ಮಗುವಿಗೆ ಒಳ್ಳೆಯ ತಾಯಿ ಆಗುತ್ತಾಳೆಯೇ? (ನೀವು ಭವಿಷ್ಯದಲ್ಲಿ ಮಕ್ಕಳನ್ನು ಹೊಂದುವುದಾದರೆ ನಿಮ್ಮ ಮಗುವಿಗೆ ಆ ಹುಡುಗಿ ಒಳ್ಳೆಯ ತಾಯಿಯಾಗುತ್ತಾಳೆ ಎಂದು ನಿಮಗೆ ಅನ್ನಿಸಬೇಕು. ಪ್ರತಿಯೊಂದು ಹುಡುಗಿಯಲ್ಲೂ ವಿಶೇಷವಾದ ತಾಯಿ ಗುಣ ಇದ್ದೇ ಇರುತ್ತದೆ. ಅದು ನಿಮಗೆ ಅರಿವಾಗಬೇಕು) ಹೀಗೆ ಕೇಳಿಕೊಂಡ ಮೂರು ಪ್ರಶ್ನೆಗಳಿಗೆ ನಿಮ್ಮಲ್ಲಿ ಸರಿಯಾದ ಉತ್ತರ ಸಿಕ್ಕಿದರೆ ಅಂಥವಳನ್ನು ಸಂಗಾತಿಯಾಗಿ ಪಡೆಯಬಹುದು. ನಾವೂ ಹುಡುಗಿಯರಿಗಾಗಿ ಇದೇ ರೀತಿ ನಡೆದುಕೊಳ್ಳಬೇಕು. ಬದುಕು ಎನ್ನುವುದು ಸದಾ ಕಾಲ ನಮ್ಮನ್ನು ಸಾವಿನ ಹತ್ತಿರವೇ ಕರೆದುಕೊಂಡು ಹೋಗುತ್ತದೆ. ಅಸಲಿಗೆ ಅದರ ಕೆಲಸವೇ ಅದು. ಹಾಗಾಗಿ ನಾವು ಸಾವಿನತ್ತ ಹೊರಡುವ ಪಯಣದಲ್ಲಿ ಮನಸಾರೆ
ಎಲ್ಲವನ್ನೂ ಹೇಳಿಕೊಳ್ಳುವ, ನಮ್ಮ ನೋವಿಗೆ, ನಲಿವಿಗೆ ಜೊತೆಯಾಗುವ ಗೆಳತಿಯನ್ನು ಹೊಂದಬೇಕು. ಹೀಗಾಗಿಯೇ ನಾನು ಎಲ್ಲಾ ಯುವಕ, ಯುವತಿಯರಿಗೂ ಪರಸ್ಪರ ಗೌರವ ನೀಡಿಕೊಂಡು ಸಂತಸವಾಗಿರುವಂತೆ ಹೇಳುತ್ತೇನೆ’ ಎನ್ನುತ್ತಾರೆ ಬರಾಕ್ ಒಬಾಮ.

ತಾವೂ ಕೂಡ ಪತ್ನಿ ಮಕ್ಕಳೊಂದಿಗೆ ಹಾಗೇ ನಗು ನಗುತ್ತಲೇ ಬದುಕುತ್ತಿರುವವರು. ಹಾಗಾಗಿಯೇ ಅವರ ಮಾತಿಗೆ ಅಷ್ಟು ಬೆಲೆ. ಅದೇ ಕಾರಣಕ್ಕೆ ಇಂದು ಅಮೆರಿಕಾದಲ್ಲಿ ಒಬಾಮಾ ಮಾತಿಗೆ ಹೆಚ್ಚಿನವರು ಹೌದೌದು ಎಂದಿರುವುದು. ಇದು ಅಮೆರಿಕಾದ ಮಾತಾಯಿತು. ಇನ್ನು ನಮ್ಮಲ್ಲಿಗೆ ಬಂದರೆ ಇದನ್ನು ಇನ್ನೂ ಸರಳ ಮಾಡಿಕೊಂಡು ಒಂದು ಹುಡುಗ ಹುಡುಗಿಯನ್ನೋ, ಹುಡುಗಿ ಹುಡುಗನನ್ನೋ ನೋಡಿದರೆ ಜೀವಮಾನ ಪೂರ್ತಿ ಇವನೊಂದಿಗೆ ಚೆನ್ನಾಗಿ ಬದುಕಿಬಿಡುತ್ತೇನೆ ಎನ್ನುವ ಭಾವವೊಂದು ಮೂಡಿದರೆ ಸಾಕು ಸಂಸಾರದ ದೋಣಿ ಅರ್ಧ ಸುಂದರವಾಗಿ ತುಲುಪಿದಂತೆಯೇ. ಒಂದಿಡೀ ಬದುಕಿನಲ್ಲಿ ಅತಿ ಹೆಚ್ಚಿನ ಸಮಯವನ್ನು ಜೊತೆಯಾಗಿ ಯೇ ಕಳೆಯುವ ಸಂಗಾತಿಯ ಆಯ್ಕೆಗೆ ಒಬಾಮಾ
ಹೇಳಿರುವ ಮೂರು ಅಂಶಗಳು ಗಂಡು, ಹೆಣ್ಣು ಇಬ್ಬರಿಗೂ ಅನ್ವಯ.

Comments are closed.