ಅಂತರಾಷ್ಟ್ರೀಯ

ಮತಯಾಚನೆಗೆ ಮೋರಿ, ಚರಂಡಿ, ತಿಪ್ಪೆ ಮೇಲೆಲ್ಲಾ ಮಲಗಿದ !

Pinterest LinkedIn Tumblr


ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಇನ್ನು 23 ದಿನಗಳಷ್ಟೇ ಬಾಕಿ ಇರುವಂತೆ ಇಂಟರ್‌ನೆಟ್‌ ತುಂಬೆಲ್ಲಾ ಅಭ್ಯರ್ಥಿಯೊಬ್ಬರ ಚುನಾವಣಾ ಗಿಮಿಕ್‌ಗಳ ಫೋಟೊಗಳು ವೈರಲ್‌ ಆಗಿವೆ.

ಕರಾಚಿಯಲ್ಲಿ ಸ್ಪರ್ಧಿಸಿರುವ ಅಯಾಜ್‌ ಮೆಮನ್‌ ಮೋತಿವಾಲಾ ಎಂಬ ಸ್ವತಂತ್ರ ಅಭ್ಯರ್ಥಿ ಮತ ಕೇಳಲು ಮೋರಿ, ಚರಂಡಿ, ತಿಪ್ಪೆ ಮೇಲೆಲ್ಲಾ ಮಲಗಿ ಫೋಟೋ ತೆಗೆಸಿಕೊಂಡಿದ್ದಾರೆ. ಜೊತೆಗೆ ಮೋರಿ ನೀರನ್ನು ಕೂಡ ಕುಡಿದಿದ್ದಾರೆ.

ಅದು ಸಾಲದು ಎಂದು ಈ ಎಲ್ಲಾ ಫೋಟೋಗಳನ್ನು ಅವರ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಕರಾಚಿಯ ಕಲುಷಿತ ವಾತಾವರಣ ಮತ್ತು ಮಲಿನತೆ ಕುರಿತು ಗಮನ ಸೆಳೆಯಲು ಅವರು ಈ ತಂತ್ರಗಳನ್ನು ಮಾಡಿದ್ದಾರೆ. ಇದನ್ನು ಪ್ರಚಾರದ ಗಿಮಿಕ್‌ ಎಂದು ಜನ ಕರೆಯುತ್ತಿದ್ದಾರೆ.

Comments are closed.