ಅಂತರಾಷ್ಟ್ರೀಯ

ಹತ್ತಾರು ಸಾವಿರ ಜನ ಜಮಾಯಿಸಿದ್ದ ಇಥಿಯೋಪಿಯಾ ಪ್ರಧಾನಿ ಕಾರ್ಯಕ್ರಮದಲ್ಲಿ ಸ್ಫೋಟ; ಹಲವು ಸಾವು

Pinterest LinkedIn Tumblr


ಅಡಿಸ್‌ ಅಬಾಬಾ : ಹತ್ತಾರು ಸಾವಿರ ಜನರು ಜಮಾಯಿಸಿದ್ದ ಇಥಿಯೋಪಿಯದ ಹೊಸ ಪ್ರಧಾನಿ ಅಬಿಯಿ ಅಹ್ಮದ್‌ ಅವರ ಪ್ರಪ್ರಥಮ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ, ಪ್ರಧಾನಿ ಭಾಷಣ ಮುಗಿಯುತ್ತಿದ್ದಂತೆಯೆ ಸರಣಿ ಸ್ಫೋಟಗಳು ಸಂಭವಿಸಿ ಹಲವಾರು ಜನರು ಮೃತಪಟ್ಟರೆಂದು ವರದಿಯಾಗಿದೆ.

ಅಡಿಸ್‌ ಅಬಾಬಾ ದ ಹೃದಯ ಭಾಗದಲ್ಲಿ ನಡೆದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ, ಪ್ರಧಾನಿ ಭಾಷಣ ಮುಗಿಯುತ್ತಿದ್ದಂತೆಯೇ ಸರಣಿ ಸ್ಫೋಟಗಳ ಸಂಭವಿಸಿದಾಗ ಜನರು ದಿಕ್ಕಾಪಾಲಾಗಿ ಓಡತೊಡಗಿದರು.

ಪ್ರಧಾನಿ ಅಬಿಇ ಅಹ್ಮದ್‌ ಕೂಡ ಪ್ರಾಣ ಭಯದಲ್ಲಿ ಅವಸರವಸರವಾಗಿ ಸ್ಥಳದಿಂದ ನಿರ್ಗಮಿಸಿದರು. ಅವರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿರುವರೆಂದು ವರದಿಯಾಗಿದೆ.

ಈ ಘಟನೆಯಲ್ಲಿ ಮೃತರಾದವರೆಲ್ಲರೂ ಪ್ರೀತಿ ಮತ್ತು ಶಾಂತಿಯ ಹುತಾತ್ಮರು ಎಂದು ಅಬಿಯಿ ಹೇಳಿರುವುದನ್ನು ಉಲ್ಲೇಖೀಸಿ ಸರಕಾರಿ ಒಡೆತನದ ಫ‌ನಾ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಟ್‌ ವರದಿ ಮಾಡಿದೆ.

ಸ್ಫೋಟದಿಂದ ಮೃತಪಟ್ಟವರ ನಿಖರ ಸಂಖೆ ಇನ್ನೂ ಗೊತ್ತಾಗಿಲ್ಲ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಾಗಿವೆ.

Comments are closed.