ಅಂತರಾಷ್ಟ್ರೀಯ

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಭಾರಿ ಮುಖಭಂಗ

Pinterest LinkedIn Tumblr

ವಿಶ್ವಸಂಸ್ಥೆ: ಕಾಶ್ಮೀರ ವಿಚಾರವಾಗಿ ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನವನ್ನು ಕೊನೆಗೂ ಭಾರತ ಏಕಾಂಗಿ ಮಾಡುವಲ್ಲಿ ಸಫಲವಾಗಿದೆ.

ಹೌದು.. ಕಾಶ್ಮೀರ ವಿಚಾರವಾಗಿ ಭಾರತವನ್ನು ವಿಶ್ವಸಂಸ್ಥೆಯ ಸಭೆಗಳಲ್ಲಿ ಕೆಣಕುತ್ತಿದ್ದ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದ್ದು, ಪಾಕಿಸ್ತಾನದ ಆರೋಪಗಳ ಮೇರೆಗೆ ವರದಿ ನೀಡಿದ್ದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ವರದಿಗೆ ಯಾವುದೇ ರಾಷ್ಟ್ರಕೂಡ ಬೆಂಬಲ ನೀಡಿಲ್ಲ.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಆಯುಕ್ತ ಝೈದ್‌ ರಾದ್‌ ಅಲ್‌ ಹುಸೈನ್‌ ನೀಡಿದ ವರದಿಯನ್ನು ಯಾವ ರಾಷ್ಟ್ರವೂ ಬೆಂಬಲಿಸಿಲ್ಲ. ಹೀಗಾಗಿ ಪಾಕಿಸ್ತಾನ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಆಯುಕ್ತ (ಒಎಚ್‌ಸಿಎಚ್‌ಆರ್‌)ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿದೆ.

ಭಾರತ ಸೇರಿದಂತೆ ಭೂತಾನ್‌, ಅಫ್ಘಾನಿಸ್ಥಾನ, ಮಾರಿಷಸ್‌, ಬೆಲಾರುಸ್‌, ಕ್ಯೂಬಾ, ವೆನಿಜುವೆಲಾ ರಾಷ್ಟ್ರಗಳು ಸರಾಸಗಟಾಗಿ ವರದಿಯನ್ನು ತಿರಸ್ಕರಿಸಿವೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ರಾಯಭಾರಿ ಫಾರೂಖ್‌ ಅಮಿಲ್‌ ವರದಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರಾದರೂ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ವರದಿಯನ್ನು ಭಾರತ ಈಗಾಗಲೇ ತಿರಸ್ಕರಿಸಿದೆ.

Comments are closed.