ಅಂತರಾಷ್ಟ್ರೀಯ

7 ವರ್ಷದ ಈ ಯೋಗ ಗುರು ಪ್ರತಿ ತಿಂಗಳು ಎಷ್ಟು ಸಂಪಾದಿಸುತ್ತಾನೆ ಗೊತ್ತಾ…?

Pinterest LinkedIn Tumblr

ಬೀಜಿಂಗ್: ಏಳು ವರ್ಷದ ಬಾಲಕನೊಬ್ಬ ಚೀನಾದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ಯೋಗ ಟೀಚರ್ ಆಗಿದ್ದಾರೆ. ಯೋಗ ಕ್ಲಾಸ್​ನಿಂದ ಈ ಬಾಲಕ ಪ್ರತಿ ತಿಂಗಳು ಸುಮಾರು 16 ಸಾವಿರ ಡಾಲರ್(10.90 ಲಕ್ಷ ರೂಪಾಯಿ) ಸಂಪಾದಿಸುತ್ತಾನೆ. ಹೀಗಾಗಿ ಈ ಬಾಲಕ ಚೀನಾದ ತನ್ನ ವಯಸ್ಸಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾನೆ.

ಚೀನಾದ ರಾಷ್ಟ್ರೀಯ ಮಾದ್ಯಮ ‘ಪೀಪಲ್ಸ್ ಡೈಲಿ’ಯ ವರದಿಯನ್ವಯ ಈ ಬಾಲಕ ಮಕ್ಕಳಿಗೆ ಪ್ರಾಚೀನ ಭಾರತದ ಯೋಗದ ತರಬೇತಿ ನೀಡುತ್ತಾನೆ. ಈ ಬಾಲಕನ ಹೆಸರು ಸುನ್ ಚುವಾಂಗ್ ಆಗಿದ್ದು, ಇಂಗ್ಲೇಷ್​ನಲ್ಲಿ ಈತನನ್ನು ಮೈಕ್ ಎಂದು ಕರೆಯುತ್ತಾರೆ. ಚೀನಾದಲ್ಲಿ ಈ ಬಾಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾನೆ. ಈ ವರ್ಷದ ಆರಮಭದಿಂದಲೂ ಸುನ್​ ಕುರಿತಾದ ಲೇಖನಗಳು ಅಲ್ಲಿನ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದವು. ಚೀನಾದ ಪೂರ್ವ ಪ್ರಾಂತ್ಯದ ಝೋಜಿಯಾಂಗ್​ನ ನಿವಾಸಿಯಾಗಿರುವ ಸುನ್​, ಪ್ರಮಾಣ ಪತ್ರ ಪಡೆದ ಜಗತ್ತಿನ ಅತ್ಯಂತ ಕಿರಿಯ ಯೋಗ ಟೀಚರ್ ಆಗಿದ್ದಾನೆ.​

ಎರಡನೇ ವಯಸ್ಸಿನಲ್ಲೇ ಯೋಗ ಕಲಿಯಲಾರಂಭಿಸಿದ್ದ ಸುನ್!

ಚೀನಾದ ರಾಷ್ಟ್ರೀಯ ದೈನಿಕ ಪತ್ರಿಕೆ ಚೈನಾ ಡೈಲಿಗೆ ಸಂದರ್ಶನ ನೀಡಿರುವ ಸುನ್ ತಾಯಿ ತನ್ನ ಮಗ ಎರಡು ವರ್ಷದ ಪ್ರಾಯದಲ್ಲೇ ಯೋಗ ಕಲಿಯಲಾರಂಭಿಸಿಡುವುದಾಗಿ ತಿಳಿಸಿದ್ದಾರೆ. ಸುನ್ ಎರಡು ವರ್ಷದವನಾಗಿದ್ದಾಗ, ಆಟಿಸಮ್​ನಿಂದ ಬಳಲುತ್ತಿರುವುದು ತಿಳಿದು ಬಂದಿತ್ತು. ಈ ಕಾಯಿಲೆಯಿಂದ ಹೊರ ಬರಲು ಆತನ ತಾಯಿ ಆತನನ್ನು ಯೋಗ ಸೆಂಟರ್​ಗೆ ಕರೆದೊಯ್ದಿದ್ದರು. ಇಲ್ಲಿಗೆ ಸೇರಿದ ಕೇವಲ ಒಂದು ವರ್ಷದೊಳಗೆ ಸುನ್ ಉತ್ತಮವಾಗಿ ಯೋಗ ಮಾಡಲಾರಂಭಿಸಿದ್ದು, ಈತ ದೇಸೀ ಪ್ರತಿಭೆಯಂತೆ ಯೋಗ ಮಾಡಲಾರಂಭಿಸಿದ್ದ. ಕೇವಲ ಎರಡು ವರ್ಷದೊಳಗೆ ಈತ ಆಟಿಸಂನಿಂದ ಕೂಡಾ ಮುಕ್ತಿ ಪಡೆದಿದ್ದಾನೆ.

ಯೋಗದಿಂದ ಆಟಿಸಂಗೆ ಬೈ ಬೈ

ಯೋಗದ ಕೆಲ ಆಸನಗಳಿಂದ ಆಟಿಸಂ ಎಂಬ ಕಾಯಿಲೆಯಿಂದ ಹೊರ ಬರಬಹುದೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ಯೋಗದಿಂದಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ವಿಕಾಸವಾಗುತ್ತದೆ.

ಚೈನಾ ರೆಡಿಯೋ ಇಂಟರ್​ ನ್ಯಾಷನಲ್​ನಲ್ಲೂ ಕಳೆದ ಕೆಲ ದಿನಗಳ ಹಿಂದೆ ವರದಿ ಬಂದಿದ್ದು, ಈ ಸಂದರ್ಭದಲ್ಲಿ ಸುನ್ ಬದುಕನ್ನು ಮತ್ತೆ ಹಳಿಗೆ ತರಲು ಆತನ ತಾಯಿ ಕೂಡಾ ಪೇರೆಂಟಲ್ ಯೋಗ ಟ್ರೇನಿಂಗ್ ಕೋರ್ಸ್​ ಮಾಡಿದ್ದರೆಂದು ತಿಳಿಸಲಾಗಿತ್ತು.

ಆರು ವರ್ಷ ವಯಸ್ಸಿನಲ್ಲಿ ಫುಲ್ ಫೇಮಸ್!

ಆರು ವರ್ಷವಾಗುವಷ್ಟರಲ್ಲಿ ಸುನ್​ ಫೇಮಸ್​ ಆಗಿದ್ದ. ಸ್ಥಳೀಯ ಯೋಗ ಸೆಂಟರ್​ ಆತನನ್ನು ಟ್ರೇನರ್ ಆಗಿ ನಿಯೋಜಿಸಿದ್ದು, ಈಗಾಗಲೇ ಆತ 100ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿದ್ದಾನೆ.

Comments are closed.