ಅಂತರಾಷ್ಟ್ರೀಯ

ಹಗ್ಗದ ಮೇಲೆ ನಡೆದ ಮದುವೆ!

Pinterest LinkedIn Tumblr


ಮದುವೆ ಅನ್ನುವುದು ಮನುಷ್ಯರ ಜೀವನದ ಪ್ರಧಾನ ಅಂಶ. ಅದನ್ನು ಎಲ್ಲರೂ ಅದ್ಧೂರಿಯಾಗಿ, ಭಿನ್ನವಾಗಿ ನಡೆಸಬೇಕು ಎಂದು ಆಶಿಸುತ್ತಾರೆ. ಪೂರ್ವ ಜರ್ಮನಿಯಲ್ಲಿ ಯುವ ಜೋಡಿಯೊಂದು ಹಗ್ಗದ ಮೇಲೆ ಬೈಕ್‌ನಲ್ಲಿ ಸಂಚರಿಸುತ್ತಾ ಮದುವೆಯಾಗಿದೆ. ನೆಲದಿಂದ 46 ಅಡಿ ಎತ್ತರದಲ್ಲಿ ಹಗ್ಗ ಕಟ್ಟಿಕೊಂಡು ಒಂದು ಬದಿಯಿಂದ ಮತ್ತೂಂದು ಬದಿಗೆ ಬೈಕ್‌ನಲ್ಲಿ ಸಂಚರಿಸುತ್ತಾ ಈ ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದೆ.

ಪೂರ್ವ ಜರ್ಮನಿಯ ಸ್ಟಾಸ್‌ ಫ‌ರ್ಟ್‌ ಎಂಬ ನಗರದಲ್ಲಿ ಈ ಸಾಹಸ ನಡೆದಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಸಾರ್ವಜನಿಕರು ಹಗ್ಗದ ಮೇಲೆ ಬೈಕ್‌ನಲ್ಲಿ ಸಂಚರಿಸುತ್ತಾ ನಡೆದ ವಿಶೇಷ ವಿವಾಹವನ್ನು ನೋಡಿ ಸಂತೋಷಪಟ್ಟರು. ನಗರದ ಪ್ರಮುಖ ಕಟ್ಟಡ ಮತ್ತು ಟವರ್‌ ನಡುವೆ ಬಿಗಿಯಾಗಿ ಹಗ್ಗ ಕಟ್ಟಲಾಗಿತ್ತು. ಅದರ ಮೇಲೆ ಬೈಕ್‌ ಸಂಚರಿಸುವ ವ್ಯವಸ್ಥೆ ಮಾಡಲಾಗಿತ್ತು.

Comments are closed.