ಅಂತರಾಷ್ಟ್ರೀಯ

ಒಳ ಉಡುಪು ಸುಟ್ಟು ಗಣರಾಜ್ಯದ ಅಧ್ಯಕ್ಷ ಮಿಲೋಸ್‌ ಜೆಮಾನ್‌ ಪ್ರತಿಭಟನೆ

Pinterest LinkedIn Tumblr


ರಾಷ್ಟ್ರಪತಿ, ಪ್ರಧಾನಮಂತ್ರಿ ಹುದ್ದೆಯಲ್ಲಿದ್ದವರು ಆ ಹುದ್ದೆಯ ಘನತೆಯನ್ನು ಕಾಯ್ದುಕೊಳ್ಳುತ್ತಾರೆ. ಅವರು ಹೀಗೂ ವರ್ತಿಸುತ್ತಾರೆಯೇ ಎಂಬಂತೆ ನಡೆದುಕೊಳ್ಳುವುದಿಲ್ಲ ಎಂಬ ನಂಬಿಕೆ. ಆದರೆ ಝೆಕ್‌ ಗಣರಾಜ್ಯದ ಅಧ್ಯಕ್ಷ ಮಿಲೋಸ್‌ ಜೆಮಾನ್‌ ಕೊಂಚ ಭಿನ್ನವಾಗಿಯೇ ವರ್ತಿಸಿದ್ದಾರೆ.

ಗುರುವಾರ (ಜೂ.14) ಸುದ್ದಿಗೋಷ್ಠಿ ನಡೆಸಲು ಪತ್ರಕರ್ತರನ್ನು ಆಹ್ವಾನಿಸಿ, ಯಾವುದೇ ವಿಚಾರ ಮಾತನಾಡದೆ, ಎರಡು ಒಳಉಡುಪುಗಳನ್ನು ಸುಟ್ಟು ಹಾಕಿದರು. ಇದರಿಂದ ಅಧ್ಯಕ್ಷರು ಏನೋ ಹೇಳಲಿದ್ದಾರೆ ಎಂಬ ನಿರೀಕ್ಷೆಯಿಟ್ಟುಕೊಂಡು ಬಂದ ಮಾಧ್ಯಮದವರು ಆಶ್ಚರ್ಯಚಕಿತರಾದರು. ಮಿಲೋಸ್‌ ಜೆಮಾನ್‌ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದರು.

ತಮ್ಮ ಕ್ರಮವನ್ನು ಸಮರ್ಥಿಸಿ ಮಾತನಾಡಿದ ಅವರು 2015ರಲ್ಲಿ ಹೋರಾಟಗಾರರು ಅಧ್ಯಕ್ಷರ ಧ್ವಜ ಬದಲಾಯಿಸಿ ಹಲವು ರೀತಿಯ ಬಟ್ಟೆಗಳನ್ನು ಕಳುಹಿಸಿದ್ದರು. ಜೆಮಾನ್‌ ಅಧ್ಯಕ್ಷರಾದ ಬಳಿಕ ರಷ್ಯಾ ಮತ್ತು ಚೀನಾ ಜತೆಗೆ ಹೆಚ್ಚಿನ ರೀತಿಯಲ್ಲಿ ಸಂಬಂಧ ವೃದ್ಧಿಯಾಗಿತ್ತು. ಅದಕ್ಕೆ ಹೋರಾಟಗಾರರು ತೀವ್ರ ರೀತಿಯಲ್ಲಿ ಆಕ್ಷೇಪ ಮಾಡಿದ್ದರು.

Comments are closed.