ಅಂತರಾಷ್ಟ್ರೀಯ

ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಜತೆಗಿರಬೇಕಾದರೆ ಆರು ಇಂಚು ಅಂತರ ಕಾಯ್ದುಕೊಳ್ಳಿ: ಪಾಕ್ ವಿವಿ

Pinterest LinkedIn Tumblr


ಇಸ್ಲಾಮಾಬಾದ್‌: ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಜತೆಗಿರಬೇಕಾದ ಸಮಯದಲ್ಲಿ ಕನಿಷ್ಠ ಆರು ಇಂಚು ಅಂತರ ಕಾಯ್ದುಕೊಳ್ಳುವಂತೆ ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ಆಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರುದ್ಧದ ಚರ್ಚೆಗಳು ತೀವ್ರವಾಗಿವೆ.

ಇಸ್ಲಾಮಾಬಾದ್‌ ಮೂಲದ ಬಹರಿಯಾ ವಿಶ್ವವಿದ್ಯಾಲಯವು ಕರಾಚಿ, ಲಾಹೋರ್‌ ಮತ್ತು ಇಸ್ಲಾಮಾಬಾದ್‌ನ ಈ ಮೂರೂ ಕ್ಯಾಂಪಸ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕಳೆದ ವಾರ ಈ ಆದೇಶ ಹೊರಡಿಸಿದೆ.

”ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಪರಸ್ಪರರಲ್ಲಿ ಕನಿಷ್ಠ ಆರು ಇಂಚು ದೂರದಲ್ಲಿ ನಿಲ್ಲುವಂತೆ ಅಥವಾ ಕೂರುವಂತೆ ಎಲ್ಲ ವಿಭಾಗದ ಮುಖ್ಯಸ್ಥರು ಮತ್ತು ಭದ್ರತಾ ಸಿಬ್ಬಂದಿ ನೋಡಿಕೊಳ್ಳಬೇಕು,” ಎಂದು ಆದೇಶ ಹೊರಡಿಸಿದೆ.

ಜತೆಗೆ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಪರಸ್ಪರ ಮುಟ್ಟುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ಸೂಚನೆಗಳನ್ನು ಪಾಲಿಸದಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅದು ಆದೇಶದಲ್ಲಿ ತಿಳಿಸಲಾಗಿದೆ.

ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ಬಹರಿಯಾ ವಿಶ್ವವಿದ್ಯಾಲಯಕ್ಕೆ ‘ಆಲ್‌ ಪಾಕಿಸ್ತಾನ್‌ ಯುನಿವರ್ಸಿಟೀಸ್‌ ಅಕಾಡೆಮಿಕ್‌ ಸ್ಟಾಫ್‌ ಅಸೋಸಿಯೇಷನ್‌’ (ಎಫ್‌ಎಪಿಯುಎಎಸ್‌ಎ) ಒತ್ತಾಯಿಸಿದೆ.

ಆದರೆ ಈ ಕ್ರಮವನ್ನು ಬಹರಿಯಾ ವಿಶ್ವವಿದ್ಯಾಲಯದ ವಕ್ತಾರ ಮೆಹವೀಶ್‌ ಕಮ್ರಾನ್‌ ಸಮರ್ಥಿಕೊಂಡಿದ್ದು, ವಿದ್ಯಾರ್ಥಿಗಳ ನಡುವೆ ಶಿಸ್ತು ಕಾಪಾಡಲು ಈ ರೀತಿ ಆಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

Comments are closed.