ಅಂತರಾಷ್ಟ್ರೀಯ

132 ಕೋಟಿ ರೂ.ಗೆ ಮಾರಾಟಕ್ಕಿಟ್ಟ ನಂಬರ್‌ ಪ್ಲೇಟ್‌ !

Pinterest LinkedIn Tumblr

ಲಂಡನ್‌: ಒಂದು ನಂಬರ್‌ ಪ್ಲೇಟ್‌ಗೆ ಹೆಚ್ಚೆಂದರೆ ನಾಲ್ಕಾರು ಲಕ್ಷ ರೂ. ಪಾವತಿ ಮಾಡುವವರು ಸಿಗಬಹುದು. ಆದರೆ ಕೋಟಿಗಟ್ಟಲೆ ರೂಪಾಯಿ ಕೊಟ್ಟು ನಂಬರ್‌ ಪ್ಲೇಟ್‌ ಖರೀದಿ ಮಾಡುವವರೂ ಇದ್ದಾರಾ? ಇರಬಹುದು. ಯಾಕೆಂದರೆ 132 ಕೋಟಿ ರೂ. ಮೊತ್ತಕ್ಕೆ ಇಂಗ್ಲೆಂಡ್‌ನ‌ಲ್ಲಿ ಒಂದು ನಂಬರ್‌ ಪ್ಲೇಟ್‌ ಮಾರಾಟಕ್ಕಿದೆ. ಅಂದರೆ ಮಾರುತಿ ಸುಜುಕಿಯ 4500 ಆಲ್ಟೋ ಕಾರು ಖರೀದಿಸುವ ಒಟ್ಟು ಮೊತ್ತದಷ್ಟು. ಇಂಗ್ಲೆಂಡ್‌ನ‌ಲ್ಲಿ ಒಂದು ನಂಬರ್‌ ಪ್ಲೇಟ್‌ ಖರೀದಿಸಿದ ಮೇಲೆ ಅದು ನಮ್ಮದೇ ಆಗಿರುತ್ತದೆ. ಎಷ್ಟು ಮೊತ್ತಕ್ಕಾದರೂ ಅದನ್ನು ಬೇರೆಯವರಿಗೆ ಮಾರಬಹುದು.

ಖಾನ್‌ ಡಿಸೈನ್‌ ಕಂಪನಿಯ ಮಾಲೀಕ ಅಫ್ಜಲ್‌ ಖಾನ್‌ 2008ರಲ್ಲಿ 4 ಕೋಟಿ ರೂ. ಕೊಟ್ಟು ಖರೀದಿಸಿದ್ದ ಎಫ್1 ಎಂಬ ನಂಬರ್‌ ಪ್ಲೇಟನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಸದ್ಯಕ್ಕೆ ಅವರು ಬಳಸುತ್ತಿರುವ ಬುಗಾಟಿ ವೇರಾನ್‌ಗೆ ಈ ನಂಬರ್‌ ಪ್ಲೇಟ್‌ ಅಂಟಿಸಲಾಗಿದೆ. ಅದಕ್ಕಿಂತ ಮೊದಲು 1904ರಿಂದ ಇದು ಎಸ್ಸೆಕ್ಸ್‌ ಸಿಟಿ ಕೌನ್ಸಿಲ್‌ನ ಕಾರಿಗೆ ಇತ್ತು.

ಇದು ಮಾರಾಟವಾದರೆ ವಿಶ್ವದಲ್ಲೇ ಅತ್ಯಂತ ದುಬಾರಿ ನಂಬರ್‌ ಪ್ಲೇಟ್‌ ಆಗಲಿದೆ. ಎಫ್1 ಮೋಟಾರ್‌ಸ್ಫೂರ್ಟ್‌ನ ಹೆ‌ಸರೂ ಇದಾಗಿರುವುದರಿಂದ ಎಫ್1 ನಂಬರ್‌ ಪ್ಲೇಟ್‌ಗೆ ಭಾರಿ ಬೇಡಿಕೆ ಇದೆ. ಸದ್ಯ ಡಿ5 ನಂಬರ್‌ ಪ್ಲೇಟ್‌ ಅತ್ಯಂತ ದುಬಾರಿಯಾಗಿದ್ದು, ಭಾರತೀಯ ಬಲ್ವಿಂದರ್‌ ಸಾಹಿ° 67 ಕೋಟಿ ರೂ.ಗೆ ಇದನ್ನು ಖರೀದಿಸಿದ್ದರು. ಇನ್ನು 2008ರಲ್ಲಿ 1 ಸಂಖ್ಯೆಯ ನಂಬರ್‌ ಪ್ಲೇಟನ್ನು ಅನುಧಾಬಿಯಲ್ಲಿ 66 ಕೋಟಿ ರೂ.ಗೆ ಮಾರಾಟ ಮಾಡಲಾಗಿತ್ತು.

Comments are closed.