ಕೌಲಾಲಂಪುರ: ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಟೀಕಾ ಪ್ರಹಾರ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಾನು ಪ್ರಧಾನಿಯಾಗಿದ್ದರೆ ನೋಟು ನಿಷೇಧ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ ಎಂದು ಹೇಳಿದ್ದಾರೆ.
ಆಗ್ನೇಯ ಏಷ್ಯಾದ ದೇಶಗಳಿಗೆ 5 ದಿನಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಶನಿವಾರ ಮಲೇಷ್ಯಾಗೆ ಭೇಟಿ ನೀಡಿದ್ದು, ಕೌಲಾಲಾಂಪುರ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು ಒಳ್ಳೆಯ ನಿರ್ಧಾರ ಆಗಿರಲಿಲ್ಲ. ಒಂದು ವೇಳೆ ನಾನು ಪ್ರಧಾನಿಯಾಗಿದ್ದರೆ ಆ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ ಎಂದು ಹೇಳಿದ್ದಾರೆ.
ನೋಟ್ ಅಮಾನ್ಯ ಕ್ರಮವನ್ನು ನೀವು ಹೇಗೆ ವಿಭಿನ್ನ ರೀತಿಯಲ್ಲಿ ಜಾರಿಗೊಳಿಸುತ್ತಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, “ಒಂದು ವೇಳೆ ನಾನು ಪ್ರಧಾನಿಯಾಗಿದಿದ್ದರೆ, ನೋಟು ಅಮಾನ್ಯದ ನಡೆಯ ಬಗ್ಗೆ ಬರೆದ ಫೈಲನ್ನು ಯಾರಾದರೂ ನನಗೆ ನೀಡಿದ್ದರೆ ನಾನು ಅದನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ. “ಯಾರಿಗೂ ಒಳ್ಳೆಯದಲ್ಲದ ನೋಟು ಅಮಾನ್ಯ ನಡೆಯ ಬಗ್ಗೆ ನಾನು ಇದೇ ನಿರ್ಧಾರವನ್ನು ಕೈಗೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.