ಅಂತರಾಷ್ಟ್ರೀಯ

ಕೋಮು ಘರ್ಷಣೆ: 10 ದಿನಗಳ ತುರ್ತು ಪರಿಸ್ಥಿತಿ ಹೇರಿದ ಶ್ರೀಲಂಕಾ ಸರ್ಕಾರ

Pinterest LinkedIn Tumblr


ಕೊಲಂಬೊ: ಶ್ರೀಲಂಕಾದ ಕೇಂದ್ರ ಭಾಗದ ಕ್ಯಾಂಡಿಯಲ್ಲಿ ಭೌದ್ಧರು ಮತ್ತು ಮುಸ್ಲಿಮರ ನಡುವಿನ ಕೋಮು ಘರ್ಷಣೆ ಹಿನ್ನೆಲೆಯಲ್ಲಿ ಮಂಗಳವಾರದಿಂದ 10 ದಿನಗಳ ಕಾಲ ಶ್ರೀಲಂಕಾ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ದೇಶದೆಲ್ಲೆಡೆ ಕೋಮು ಗಲಭೆಗಳು ಹಬ್ಬದಂತೆ ತಡೆಯುವ ಸಲುವಾಗಿ 10 ದಿನಗಳ ಕಾಲದ ತುರ್ತು ಪರಿಸ್ಥಿತಿ ಘೋಷಿಸಲು ವಿಶೇಷ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೆ, ಫೇಸ್​ಬುಕ್ ಸಾಮಾಜಿಕ ಜಾಲತಾಣದಲ್ಲಿ ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಕ್ತಾರ ದಯಾಸಿರಿ ಜಯಶೇಖರ ತಿಳಿಸಿದ್ದಾರೆ.

ಕ್ರಿಕೆಟ್​ ಸರಣಿಯಲ್ಲಿ ಆಡಲು ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾದಲ್ಲಿ ಬೀಡುಬಿಟ್ಟಿದೆ.

ಹಲವಾರು ವರ್ಷಗಳಿಂದಲೂ ಎರಡು ಸಮುದಾಯಗಳ ನಡುವೆ ಕೋಮು ಹಿಂಸಾಚಾರ ನಡೆಯುತ್ತಿದೆ. ಮುಸ್ಲಿಮರು ಬೌದ್ಧರನ್ನು ಒತ್ತಾಯಪೂರ್ವಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ. ಅಲ್ಲದೆ, ಬೌದ್ಧ ದೇಗುಲಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂದು ಬೌದ್ಧರು ಆರೋಪಿಸಿದ್ದಾರೆ.

ಇನ್ನು ಸೋಮವಾರವಷ್ಟೇ ಉದ್ರಿಕ್ತ ಗುಂಪೊಂದು ಮುಸ್ಲಿಂ ಅಂಗಡಿಗಳ ಮೇಲೆ ಬೆಂಕಿ ಹಚ್ಚಿದ್ದರಿಂದ ಸರ್ಕಾರ ಕ್ಯಾಂಡಿಗೆ ಸೇನಾಪಡೆ ಮತ್ತು ಪೊಲೀಸರನ್ನು ನಿಯೋಜಿಸಿತ್ತು.

Comments are closed.