ಅಂತರಾಷ್ಟ್ರೀಯ

ಮೂರು ಬಾಂಬು ಸ್ಫೋಟ: ಹಲವರಿಗೆ ಗಾಯ

Pinterest LinkedIn Tumblr


ರಖೈನ್: ಕೋಮುಗಲಭೆ ಮತ್ತು ಹಿಂಸಾಚಾರದಿಂದ ತತ್ತರಿಸಿದ ಮ್ಯಾನ್ಮಾರ್ ನ ರಖೈನ್ ರಾಜ್ಯದಲ್ಲಿ ಸರಕಾರಿ ಕಚೇರಿಗಳು ಮತ್ತು ಇತರ ಸ್ಥಳಗಳನ್ನು ಗುರಿಯಾ ಗಿಸಿಕೊಂಡು ನಡೆದ ಬಾಂಬ್ ದಾಳಿಗಳಲ್ಲಿ ಹಲವರು ಗಾಯಗೊಂಡಿದ್ದಾರೆ.

ರಖೈನ್ ರಾಜ್ಯದ ರಾಜ್ಯಧಾನಿ ಸಿಟ್ವಿಯಲ್ಲಿ ಬೆಳಗ್ಗೆ ಘಟನೆ ನಡೆದಿದೆ. ಆರು ಬಾಂಬುಗಳ ಪೈಕಿ ಮೂರು ಸ್ಫೋಟಗೊಂಡಿವೆ. ಉಳಿದ ವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸರಕಾರದ ಮುಂಭಾಗ ಸಂಭವಿಸಿದ ಸ್ಫೋಟ ಪ್ರಕರಣ ದಲ್ಲಿ ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಸ್ಫೋಟಗಳು ಮತ್ತು ಸ್ಫೋಟಕ ಸಾಧನಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸಿಟ್ವಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತಷ್ಟು ಬಾಂಬ್‍ಗಳಿಗೆ ಶೋಧ ನಡೆಸಿದೆ. ಸಿಟ್ವಿ ಸೇರಿದಂತೆ, ರಖೈನ್ ರಾಜ್ಯದ ಅನೇಕ ಪ್ರಾಂತ್ಯಗಳಲ್ಲಿ ಇತ್ತೀಚೆಗೆ ಕೋಮು ಗಲಭೆ ಮತ್ತು ಹಿಂಚಾಚಾರ ಭುಗಿಲೆದ್ದು ಲಕ್ಷಾಂತರ ರೋಹಿಂಗ್ಯಾ ಮುಸ್ಲಿಮರ ಪಲಾಯನವಾಗಿದ್ದರು.

Comments are closed.