ಅಂತರಾಷ್ಟ್ರೀಯ

ಪಾಕಿಸ್ತಾನದಲ್ಲಿ ಚೀನಾ ಭಾಷೆ ಅಧಿಕೃತವಲ್ಲ, ಅಧ್ಯಯನಕ್ಕೆ ಮಾತ್ರ

Pinterest LinkedIn Tumblr


ಪಾಕಿಸ್ತಾನ: ಚೀನಾದ ಮ್ಯಾಂಡರಿನ್ ಭಾಷೆಯನ್ನು ಅಧ್ಯಯನ ಭಾಷೆಯಾಗಿ ಪಾಕ್​ ಸೆನಟ್​ನಲ್ಲಿ ಪಾಸ್​ ಮಾಡಲಾಗಿದೆ. ಮ್ಯಾಂಡರಿನ್ ಭಾಷೆಗೆ ಪಾಕ್​ ಅಧಿಕೃತ ಮುದ್ರೆ ಕುರಿತು ಎಂದಿದ್ದ ಸುದ್ದಿಗೆ ಪುರ್ಣ ವಿರಾಮ ಇಟ್ಟಿದೆ.

ಚೀನಾ ಮತ್ತು ಪಾಕಿಸ್ತಾನದ ಸಂಬಂಧಗಳು ಇನ್ನಷ್ಟು ಗಟ್ಟಿಗೊಳ್ಳುವ ಸೂಚನೆ ದಟ್ಟವಾಗಿದೆ. ಚೀನಾದ ಮ್ಯಾಂಡರಿನ್ ಭಾಷೆಯನ್ನು ಪಾಕ್​ನ ಅಧಿಕೃತ ಭಾಷೆಗಳಲ್ಲಿ ಒಂದು ಎಂದು ಪಾಕಿಸ್ತಾನ ಶಾಸನ ಮಂಡಳಿ ಸೋಮವಾರ ಘೋಷಿಸಿದೆ ಎಂದು ವರದಿಯಾಗಿತ್ತು.

ಚೀನಾದ ರೋಡ್ ಮತ್ತು ಬೆಲ್ಟ್ ಗ್ಲೋಬಲ್ ಯೋಜನೆಯ ಭಾಗವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ವಲಯದ ಕೆಲಸಗಳು ನಡೆಯುತ್ತಿವೆ. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಭಾಷೆಗಳ ವಿಚಾರವಾಗಿ ಸಮಸ್ಯೆ ಬಾರದಂತೆ ಮ್ಯಾಂಡರಿನ್ ಭಾಷೆಯನ್ನು ಅಧ್ಯಯನ ಭಾಷೆಯಾಗಿ ಸ್ವೀಕರಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

Comments are closed.