ಅಂತರಾಷ್ಟ್ರೀಯ

ಇಲ್ಲಿ ಒಂದು ಲೀಟರ್ ಹಾಲಿಗೆ 80 ಸಾವಿರ ರೂ !

Pinterest LinkedIn Tumblr

ಕಾರಾಕಾಸ್ (ವೆನೆಜುವೆಲಾ): ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಮತ್ತು ಸರ್ಕಾರದ ದೂರಾಲೋಚನೆ ರಹಿತ ಆರ್ಥಿಕ ನೀತಿಗಳಿಂದಾಗಿ ಎರಡು ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ವೆನೆಜುವೆಲಾದಲ್ಲಿ ದಿನಬಳಕೆ ವಸ್ತುಗಳ ದರ ಗಗನಚುಂಬಿಸಿದೆ. ಒಂದು ಲೀಟರ್ ಹಾಲಿನ ದರ 80 ಸಾವಿರ ರೂ. ಮೀರಿದೆ. ಜತೆಗೆ ಒಂದು ಪೌಂಡ್ ಬ್ರೆಡ್ 1 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಒಂದು ಕೆ.ಜಿ. ಮಾಂಸ 3 ಲಕ್ಷಕ್ಕೆ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ.

ದೇಶಾದ್ಯಂತ ಜನರು ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದೆೆ. ಆರ್ಥಿಕತೆ ಪುನಶ್ಚೇತನಕ್ಕೆ ನಿಕೊಲಾಸ್ ಮಡುರೊ ನೇತೃತ್ವದ ಸರ್ಕಾರ ಜರುಗಿಸಿದ ಕ್ರಮಗಳೆಲ್ಲವೂ ವಿಫಲಗೊಂಡಿರುವ ಕಾರಣ ಹಣದುಬ್ಬರ ಮಿತಿಮೀರಿದೆ. ಭಾರತದ ರೂಪಾಯಿ ಎದುರು ವೆನೆಜುವೆಲಾದ ಕರೆನ್ಸಿ ‘ಬೊಲಿವರ್ ’ ಮೌಲ್ಯ 0.0023ಕ್ಕೆ ಕುಸಿದಿದೆ.

Comments are closed.