ಅಂತರಾಷ್ಟ್ರೀಯ

ಕೆನಡಾ, ಇಂಡೋನೇಷ್ಯಾದಲ್ಲಿ ಭೂಕಂಪ: ಸುನಾಮಿ ಭೀತಿಯಲ್ಲಿ ಜನ

Pinterest LinkedIn Tumblr

ಅಲಸ್ಕಾ/ಜಕಾರ್ತಾ: ಕೆನಡಾದ ಅಲಸ್ಕಾ ಹಾಗೂ ಇಂಡೋನೇಷ್ಯಾದ ಜಕಾರ್ತಾದಲ್ಲಿ ಮಂಗಳವಾರ ಭೂಕಂಪ ಸಂಭವಿಸಿದ್ದು, ಅಲಸ್ಕಾ ಕರಾವಳಿಯಲ್ಲಿ ಸುನಾಮಿ ಭೀತಿ ಎದುರಾಗಿದೆ.

ಅಲಸ್ಕಾ ಸುತ್ತಮುತ್ತಲ ಪ್ರದೇಶದಲ್ಲಿ 8.2 ರಷ್ಟು ಭೂಕಂಪ ತೀವ್ರತೆ ದಾಖಲಾಗಿದೆ. ಸುನಾಮಿ ಅಪಾಯ ಇರುವುದರಿಂದ ಕರಾವಳಿ ಸಮೀಪದ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ.

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ ಕೆಲವು ಕಟ್ಟಡಗಳಿಗೆ ಹಾನಿಯಾಗಿರುವುದು ವರದಿಯಾಗಿದೆ. ಯಾರಿಗೂ ಅಪಾಯ ಆಗಿರುವ ಕುರಿತು ವರದಿಯಾಗಿಲ್ಲ.

‘ರಿಕ್ಟರ್‌ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದ್ದು, ಭೂಕಂಪನದ ಕೇಂದ್ರಬಿಂದು 10 ಕಿ.ಮೀ ಆಳದಲ್ಲಿತ್ತು’ ಎಂದು ವಿಶ್ವಸಂಸ್ಥೆಯ ಭೂವಿಜ್ಞಾನ ಸಮೀಕ್ಷೆ ತಿಳಿಸಿದೆ.‌

Comments are closed.