ಅಂತರಾಷ್ಟ್ರೀಯ

ಅಷ್ಟಕ್ಕೂ ಪೊಲೀಸರು ಈ ಕಾರು ನೋಡಿ ಬೇಸ್ತು ಬಿದ್ದಿದ್ದೇಕೆ..?

Pinterest LinkedIn Tumblr

ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುವ ಪೊಲೀಸರಿಗೆ ಹಲವು ರೀತಿಯ ಅನುಭವಗಳಾಗಿರುತ್ತವೆ. ಕೆಲವೊಮ್ಮೆ ಜನರು ಗೋಳು ಹೊಯ್ದುಕೊಂಡರೆ, ಮತ್ತೆ ಕೆಲವೊಮ್ಮೆ ವಿಚಿತ್ರ ನಡವಳಿಕೆಯ ವ್ಯಕ್ತಿಗಳು ಮುಖಾಮುಖಿಯಾಗು ತ್ತಾರೆ. ಅಂತಹ ಸಂದರ್ಭದಲ್ಲಿ ಜಾಣ್ಮೆಯಿಂದ ಅವುಗಳನ್ನು ನಿಭಯಿಸಬೇಕಾಗುತ್ತದೆ.

ಕೆನಡಾದ ಮಾಂಟ್ರಿಯಲ್​ನಲ್ಲಿ ಇತ್ತೀಚೆಗೆ ಪೊಲೀಸರು ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುವ ವೇಳೆ ಬೇಸ್ತು ಬಿದ್ದಿದ್ದಾರೆ. ಅದು ಕೂಡ ನಕಲಿ ಕಾರನ್ನು ನೋಡಿ!

ಕೆನಡಾದ ಮರದಶಿಲ್ಪ ಕಲಾವಿದ ಸಿಮೋನ್ ಲ್ಯಾಪ್ರಿಸ್ ಹಿಮದ ರಾಶಿಯನ್ನು ಬಳಸಿ ಕಾರು ತಯಾರಿಸಿದ್ದರು. ಈ ಕಾರನ್ನು ನಿರ್ವಿುಸಿದ್ದು ನೋ ರ್ಪಾಂಗ್ ಪ್ರದೇಶದಲ್ಲಿ. ಇದರಿಂದಾಗಿ ಪೊಲೀಸರು ಬೇಸ್ತು ಬೀಳುವಂತಾಯಿತು. ಸಿಮೋನ್​ಗೆ ಪೊಲೀಸರನ್ನು ಗೋಳು ಹೊಯ್ದುಕೊಳ್ಳುವ ಉದ್ದೇಶವಿರಲಿಲ್ಲ. ತಮಾಷೆ ನೋಡೋಣ ಎಂದು ರಾತ್ರಿ ವೇಳೆ ರಸ್ತೆಯಲ್ಲಿ ಶೇಖರವಾಗಿರುವ ಹಿಮದರಾಶಿಯನ್ನು ತೆರವುಗೊಳಿಸುವ ದಾರಿಯಲ್ಲಿಯೇ ಹಿಮದ ಕಾರು ನಿರ್ವಿುಸಿದ್ದಾರೆ. ಅದಕ್ಕೆ ಟರ್ಪಾಲಿನ್ ಹಾಕಿ ಮುಚ್ಚಿದ್ದರಿಂದ, ನೋಡಲು ಅದು ನೈಜ ಕಾರಿನಂತೆಯೇ ಕಾಣುತ್ತಿತ್ತು. ರಸ್ತೆಯಲ್ಲೇ ಕಾರು ರ್ಪಾಂಗ್ ಮಾಡಿದ್ದಾರೆಂದು ತಿಳಿದ ಪೊಲೀಸರು ಕಾರಿನ ಪ್ರತಿಕೃತಿಯಲ್ಲಿ ನೋಟಿಸ್ ಇರಿಸಿ ಹೋಗಿದ್ದಾರೆ. ಆದರೆ ನೋಟಿಸ್​ಗೆ ಪ್ರತಿಕ್ರಿಯೆ ಬಾರದಾದಾಗ ಮತ್ತೆ ಕಾರು ನಿಂತಿದ್ದ ಸ್ಥಳಕ್ಕೆ ಬಂದು ನೋಡಿದ್ದಾರೆ. ಅದು ನಕಲಿ ಕಾರು ಎಂದು ಗೊತ್ತಾಗಿದೆ.

Comments are closed.