ಅಂತರಾಷ್ಟ್ರೀಯ

ಬಾಗ್ದಾದ್ ನಲ್ಲಿ ಅವಳಿ ಬಾಂಬ್ ಸ್ಫೋಟ: ಕನಿಷ್ಠ 38 ಸಾವು, 105 ಮಂದಿಗೆ ಗಾಯ

Pinterest LinkedIn Tumblr

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ಸಂಭವಿಸಿದ ಎರಡು ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 38 ಮಂದಿ ಸಾವನ್ನಪ್ಪಿದ್ದಾರೆ.

ನಗರದ ತಯಾರಾನ್ ಚೌಕದಲ್ಲಿ ಅವಳಿ ಬಾಂಬ್ ದಾಳಿ ನಡೆಸಿದ್ದು ದಿನಗೂಲಿ ಕೆಲಸಕ್ಕಾಗಿ ಈ ಚೌಕದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಸದ್ಯ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ.

ಭೀಕರ ಬಾಂಬ್ ದಾಳಿಯಲ್ಲಿ 38 ಮಂದಿ ಸಾವನ್ನಪ್ಪಿದ್ದು 105 ಮಂದಿ ಗಾಯಗೊಂಡಿದ್ದಾರೆ ಎಂದು ಪೂರ್ವ ಬಾಗ್ದಾದಿನ ಆರೋಗ್ಯ ಇಲಾಖೆ ಮುಖ್ಯಸ್ಥ ಡಾ. ಅಬ್ದೇಲ್ ಘನೀ ಅಲ್ ಸಾದಿ ಹೇಳಿದ್ದಾರೆ.

Comments are closed.