
ಬ್ರಿಟನ್‌ನ ಮೋಸ್ಟ್ ಗ್ಲಾಮರಸ್ ಅಜ್ಜಿ ಎಂದೇ ಹೆಸರು ಪಡೆದಿರುವ ಕ್ಯಾರಿ ಹಿಲ್ಟನ್ ತಾವು ಅಜ್ಜಿಯಾದ ಬಳಿಕವೂ ಇಷ್ಟೊಂದು ಫಿಟ್ ಆಗಿರುವ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಸತತ 5 ವರ್ಷಗಳ ಕಾಲ ಜಿಮ್‌ನಲ್ಲಿ ಬೆವರು ಸುರಿಸಿ, 11.35 ಲಕ್ಷ ರೂ. ವ್ಯಯಿಸಿ ಶೃಂಗಾರ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಅಜ್ಜಿ ಎಂದರೆ 65-75 ವರ್ಷದ ಅಜ್ಜಿ ಎಂದು ತಪ್ಪು ತಿಳಿಯಬೇಡಿ.
ಕ್ಯಾರಿ 35 ವರ್ಷದ ಅಜ್ಜಿ. ಇವರು 18 ವರ್ಷ ವಯಸ್ಸಿನವರಿದ್ದಾಗ ಕ್ಲಾರಿಸ್ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆಕೆ 17 ವರ್ಷಕ್ಕೆ ತಾಯಿಯಾದಳು. ಹೀಗಾಗಿ ಕ್ಯಾರಿಗೆ ಬ್ರಿಟನ್‌ನ ಮೋಸ್ಟ್ ಗ್ಲಾಮರಸ್ ಅಜ್ಜಿ ಪಟ್ಟ ಸಿಕ್ಕಿದೆ.
-ಉದಯವಾಣಿ
Comments are closed.