
ಲಂಡನ್: ಕಳೆದ ಹಲವು ದಿನಗಳಿಂದ ಯಾರ ಭಯವೂ ಇಲ್ಲದೇ ಪರೀಕ್ಷಾ ಕ್ಷಿಪಣಿ ಹಾರಾಟ ನಡೆಸಿ ಭಯ ಮೂಡಿಸಿದ್ದ ಉತ್ತರ ಕೊರಿಯಾ ಇದೀಗ ಮತ್ತೊಂದು ಮಿಸೈಲ್ ಉಡಾವಣೆ ನಡೆಸಿದ್ದು ಆದರೆ ಈ ಕ್ಷಿಪಣಿ ಉ.ಕೊರಿಯಾದ ನಗರವೊಂದರ ಮೇಲೆ ಬಿದ್ದು ಕೆಲಕಾಲ ಆತಂಕದ ವಾತಾವರಣ ನಿರ್ಮಿಸಿದೆ.
ಅಮೆರಿಕ ಅಧಿಕಾರಿಗಳು ಪ್ರಕಾರ, ಉ.ಕೊರಿಯಾ ಹ್ವಸೋಂಗ್-12 ಕ್ಷಿಪಣಿಯನ್ನು ಉಡಾವಣೆ ಮಾಡಿದ್ದು, ತಾಂತ್ರಿಕಕ ದೋಷ ಕಾಣಿಸಿಕೊಂಡ ಪರಿಣಾಮ ಇದು ರಾಜಧಾನಿ ಪ್ಯೊಂಗ್ಯಾಂಗ್‌ನಿಂದ ಸುಮಾರು 90 ಮೈಲಿ ದೂರದಲ್ಲಿರುವ ಟಾಕ್ಚಾನ್ ನಗರಕ್ಕೆ ಅಪ್ಪಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಸುಮಾರು ಎರಡು ಲಕ್ಷ ಜನಸಂಖ್ಯೆ ಹೊಂದಿರುವ ಈ ಪ್ರದೇಶದಲ್ಲಿ ಮಿಸೈಲ್ ಅಪ್ಪಳಿಸಿದ ಪರಿಣಾಮ ಕೆಲ ಕಟ್ಟಡಗಳಿಗೆ ಹಾನಿಯಾಗಿದೆ. ಉಡಾವಣೆಗೊಂಡ ನಂತರ 24 ಮೈಲು ದೂರ ವಾಯುವ್ಯ ದಿಕ್ಕಿಗೆ ಕ್ರಮಿಸಿದ ಮಿಸೈಲ್ 43 ಮೈಲು ಎತ್ತರವೂ ಸಾಗಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಿಂದ ಸಾವುನೋವುಗಳ ಕುರಿತು ಇನ್ನೂ ಯಾವುದೇ ವರದಿಯಾಗಿಲ್ಲ, ಆದರೆ ಕಳೆದ ಹಳವು ದಿನಗಳಿಂದ ಜಪಾನ್ ಸುತ್ತ ಪ್ರದೇಶದ ಮೇಲೆ ಯಾವುದೇ ಮುನ್ನೆಚ್ಚರಿಕೆ ನೀಡದೆ ಉ.ಕೋರಿಯಾ ಕ್ಷಿಪಣಿ ಪ್ರಯೋಗ ಮಾಡಿದೆ.
Comments are closed.