
ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುವ ಕಳ್ಳರು ಸಿಕ್ಕಿಬೀಳುವ ಸುದ್ದಿಗಳನ್ನು ನೀವು ಆಗಾಗ್ಗೆ ಕೇಳುತ್ತಲೇ ಇರುತ್ತೀರ. ಅಂತೆಯೇ, ಥಾಯ್ಲೆಂಡ್ನ 27 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಕೊಕೇನ್ ಸಾಗಿಸುವಾಗ ಸಿಕ್ಕಿ ಬಿದ್ದಿದ್ದಾಳೆ. ರಂಗೋಲಿ ಕೆಳಗೆ ತೂರಲು ಹೋಗಿದ್ದ ಈ ಮಹಿಳೆ ಕೊಕೇನ್ನನ್ನು ಹೇಗೆ ಸಾಗಿಸುತ್ತಿದ್ದಳು ಎಂದು ಕೇಳಿದರೆ ನೀವು ಬೆಚ್ಚಿ ಬೀಳುತ್ತೀರ.
ಈಕೆ 1.2 ಕೆಜಿ ಕೊಕೇನ್ ಅನ್ನು ನುಂಗಿ ಹೊಟ್ಟೆಯಲ್ಲಿ ಇರಿಸಿಕೊಂಡು ಸಾಗಿಸುತ್ತಿದ್ದಳು. ಐವರಿ ಕೋಸ್ಟ್ನ ಈ ಮಹಿಳೆ ಥಾಯ್ಲೆಂಡ್ನ ಫೂಕೆಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ, ನಿಲ್ದಾಣದ ಎಕ್ಸ್ರೇ ಮೂಲಕ ಹೊಟ್ಟೆಯಲ್ಲಿ ಸಂಶಯಾಸ್ಪದ ವಸ್ತು ಇರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿ ನೋಡಿದ್ದಾರೆ. ಬಳಿಕ ಆಕೆಯನ್ನು ತಪಾಸಣೆಗೆ ಒಡ್ಡಿದ್ದಾರೆ. ಆಗ ಆಕೆಯ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಕವರ್ವೊಂದರಲ್ಲಿ 1.2 ಕೆ.ಜಿ ಕೊಕೇನ್ ಇರುವುದು ತಿಳಿದುಬಂದಿದೆ. ಥಾಯ್ಲೆಂಡ್ನ ಒಟ್ಟು ಕೈದಿಗಳಲ್ಲಿ ಶೇ.70ರಷ್ಟು ಮಂದಿ ಮಾದಕ ದ್ರವ್ಯ ಅಕ್ರಮ ಸಾಗಣೆಯ ದೋಷಿಗಳು. ಅವರಲ್ಲಿ ಮಹಿಳಾ ಕೈದಿಗಳ ಸಂಖ್ಯೆಯೇ 39,000 ಇದೆ.
Comments are closed.